HomeHealthಪಾದಗಳ ನೋವಿನಿಂದ ಬಳಲುತ್ತಿದ್ದೀರಾ.......? ಸುಲಭವಾಗಿ ನಿವಾರಿಸಿಕೊಳ್ಳಿ

ಪಾದಗಳ ನೋವಿನಿಂದ ಬಳಲುತ್ತಿದ್ದೀರಾ…….? ಸುಲಭವಾಗಿ ನಿವಾರಿಸಿಕೊಳ್ಳಿ

ಹಿಮ್ಮಡಿ ಪಾದ ನೋಯುವುದು ಹಲವರ ಸಾಮಾನ್ಯ ಸಮಸ್ಯೆ. ಕೆಲವೊಮ್ಮೆ ಇದಕ್ಕೆ ದೇಹ ತೂಕ ಹೆಚ್ಚಿರುವುದೂ ಕಾರಣವಿರಬಹುದು. ಅಥವಾ ದೇಹದಲ್ಲಿ ಉಷ್ಣಾಂಶ ಜಾಸ್ತಿಯಾಗಿರುವುದೂ ಇರಬಹುದು. ಇದಕ್ಕೆ ದೇಹ ತಂಪು ಮಾಡಿಕೊಳ್ಳುವುದೇ ಪರಿಹಾರ.

ಎರಡು ಚಮಚ ಕೊತ್ತಂಬರಿ ಕಾಳು ಹಾಗೂ ಜೀರಿಗೆಯನ್ನು ಸರಿಯಾಗಿ ಹುರಿಯಿರಿ. ಆದರ ಪರಿಮಳ ಹೊರ ಸೂಸುತ್ತಲೇ ಕೆಳಗಿಳಿಸಿ. ಮಿಕ್ಸಿಯಲ್ಲಿ ರುಬ್ಬಿ ಪುಡಿ ಮಾಡಿ ಇಟ್ಟುಕೊಳ್ಳಿ. ನಿತ್ಯ ಇದನ್ನು ಬೆಳಿಗ್ಗೆ – ಸಂಜೆ ಬಿಸಿನೀರಿನಲ್ಲಿ ಕುದಿಸಿ ಕುಡಿಯುವುದರಿಂದ ಹಿಮ್ಮಡಿ ಪಾದಗಳ ನೋವು ಕಡಿಮೆಯಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ನೋವನ್ನು ಕಡಿಮೆ ಮಾಡಿಕೊಳ್ಳಲು ನಿತ್ಯ ವಾಕಿಂಗ್ ಹೋಗುವುದು ಬಹಳ ಮುಖ್ಯ. ಇದರಿಂದ ದೇಹ ತೂಕವೂ ಕಡಿಮೆಯಾಗುತ್ತದೆ. ಕಾಲು ನೋವಿನ ಸಮಸ್ಯೆಯೂ ದೂರವಾಗುತ್ತದೆ.

ಬಿಸಿನೀರಿಗೆ ಒಂದು ಮುಷ್ಟಿ ಉಪ್ಪು ಹಾಕಿ ಕರಗಿಸಿ. ಅದನ್ನು ಅಗಲವಾದ ಬಕೆಟ್ ಗೆ ಹಾಕಿ. ನೀರು ಪಾದ ಮುಳುಗುವಷ್ಟಿರಲಿ. ಹತ್ತು ನಿಮಿಷದ ಬಳಿಕ ಕಾಲನ್ನು ಹೊರತೆಗೆದು ಸ್ವಚ್ಛವಾದ ಬಟ್ಟೆಯಿಂದ ಒರೆಸಿ.

For Latest News Updates, Join Our Whatsapp Community🚩
RELATED ARTICLES

Most Popular