HomeLive Newsಲವರ್ ಜೊತೆ ‘ಓಯೋ ರೂಮ್‌’ಗೆ ಹೋದಾಗ ಪೊಲೀಸ್ರು ಬಂದ್ರೆ ಏನು ಮಾಡಬೇಕು..!  ಕಾನೂನು ತಿಳಿಯಿರಿ.!

ಲವರ್ ಜೊತೆ ‘ಓಯೋ ರೂಮ್‌’ಗೆ ಹೋದಾಗ ಪೊಲೀಸ್ರು ಬಂದ್ರೆ ಏನು ಮಾಡಬೇಕು..!  ಕಾನೂನು ತಿಳಿಯಿರಿ.!

ಭಾರತೀಯ ಕಾನೂನಿನ ಪ್ರಕಾರ, ಇಬ್ಬರು ವಯಸ್ಕರು(Adults) ಪರಸ್ಪರ ಒಪ್ಪಿಗೆಯಿಂದ ಹೋಟೆಲ್ ರೂಮ್‌ನಲ್ಲಿ ಸಮಯ ಕಳೆಯುವುದು ಯಾವುದೇ ರೀತಿಯಲ್ಲಿ ಅಪರಾಧವಲ್ಲ.ಹುಡುಗನಿಗೆ 21 ವರ್ಷ ಮತ್ತು ಹುಡುಗಿಗೆ 18 ವರ್ಷ ತುಂಬಿರಬೇಕು.ಸುಪ್ರೀಂ ಕೋರ್ಟ್‌ನ ಹಲವು ತೀರ್ಪುಗಳ ಪ್ರಕಾರ, ವಯಸ್ಕರು ಒಟ್ಟಿಗೆ ಇರುವುದು ಅವರ ವೈಯಕ್ತಿಕ ಸ್ವಾತಂತ್ರ್ಯದ ಭಾಗವಾಗಿದೆ (Right to Privacy – Article 21).ಮದುವೆಯಾಗದ ದಂಪತಿಗಳು ಹೋಟೆಲ್‌ನಲ್ಲಿ ತಂಗಬಾರದು ಎಂಬ ಯಾವುದೇ ಕಾನೂನು ಭಾರತದಲ್ಲಿ ಇಲ್ಲ.

ಪೊಲೀಸರು ದಾಳಿ ಮಾಡಿದರೆ ನಿಮ್ಮ ಹಕ್ಕುಗಳೇನು?

ಒಂದು ವೇಳೆ ಪೊಲೀಸರು ಹೋಟೆಲ್‌ಗೆ ಬಂದು ನಿಮ್ಮನ್ನು ಪ್ರಶ್ನಿಸಿದರೆ, ನೀವು ಈ ಕೆಳಗಿನ ಹಕ್ಕುಗಳನ್ನು ಚಲಾಯಿಸಬಹುದು:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

1. ಸಂವಿಧಾನ ನೀಡಿದ ರಕ್ಷಣೆ (Right to Privacy)

  • ಭಾರತೀಯ ಸಂವಿಧಾನದ ಆರ್ಟಿಕಲ್ 21 ರ ಪ್ರಕಾರ, ಪ್ರತಿಯೊಬ್ಬ ಪೌರನಿಗೂ ‘ಜೀವಿಸುವ ಹಕ್ಕು’ ಮತ್ತು ‘ವೈಯಕ್ತಿಕ ಸ್ವಾತಂತ್ರ್ಯ’ (Right to Privacy) ಇದೆ.
  • 18 ವರ್ಷ ತುಂಬಿದ ವಯಸ್ಕರು ತಮಗೆ ಇಷ್ಟವಾದವರ ಜೊತೆ ಸಮಯ ಕಳೆಯುವ ಪೂರ್ಣ ಸ್ವಾತಂತ್ರ್ಯ ಹೊಂದಿದ್ದಾರೆ.
  • ಹೋಟೆಲ್ ಕೊಠಡಿಯಲ್ಲಿ ಪರಸ್ಪರ ಒಪ್ಪಿಗೆಯಿಂದ ಇರುವುದು ಅಪರಾಧವಲ್ಲ ಮತ್ತು ಪೊಲೀಸರು ಇದನ್ನು ತಡೆಯುವಂತಿಲ್ಲ.

2. ಪೊಲೀಸರು ತಪಾಸಣೆ (Ride) ನಡೆಸಿದಾಗ ಏನು ಮಾಡಬೇಕು?

  • ಗುರುತಿನ ಚೀಟಿ (ID Proof): ಪೊಲೀಸರು ಬಂದಾಗ ನೀವು ವಯಸ್ಕರು ಎಂದು ಸಾಬೀತುಪಡಿಸಲು ಆಧಾರ್ ಕಾರ್ಡ್ ಅಥವಾ ವೋಟರ್ ಐಡಿ ತೋರಿಸಬೇಕು.
  • ಪೋಷಕರಿಗೆ ಕರೆ ಮಾಡುವುದು: ಪೊಲೀಸರು ನಿಮ್ಮ ಪೋಷಕರಿಗೆ ಫೋನ್ ಮಾಡಲು ಕೇಳಿದರೆ, ಅದು ಕೇವಲ ವಿನಂತಿ ಮಾತ್ರ. ನೀವು ವಯಸ್ಕರಾಗಿದ್ದಾಗ, ಮನೆಯವರಿಗೆ ಫೋನ್ ಮಾಡಲು ಒತ್ತಾಯಿಸುವ ಕಾನೂನುಬದ್ಧ ಅಧಿಕಾರ ಪೊಲೀಸರಿಗಿಲ್ಲ. ಅದು ಸಂಪೂರ್ಣವಾಗಿ ನಿಮ್ಮ ಇಷ್ಟಕ್ಕೆ ಬಿಟ್ಟದ್ದು.

3. ಪೊಲೀಸರು ಅಸಭ್ಯವಾಗಿ ವರ್ತಿಸಿದರೆ ಶಿಕ್ಷೆ

  • ಯಾವುದೇ ಕಾನೂನುಬಾಹಿರ ಕೆಲಸ ಮಾಡದ ಹೊರತು ಪೊಲೀಸರು ನಿಮ್ಮನ್ನು ಬಂಧಿಸುವಂತಿಲ್ಲ ಅಥವಾ ಪೊಲೀಸ್ ಸ್ಟೇಷನ್‌ಗೆ ಕರೆದೊಯ್ಯುವಂತಿಲ್ಲ.
  • ಒಂದು ವೇಳೆ ಪೊಲೀಸರು ನಿಮ್ಮನ್ನು ಬೆದರಿಸಿದರೆ ಅಥವಾ ಅಸಭ್ಯವಾಗಿ ವರ್ತಿಸಿದರೆ, ಅವರ ಮೇಲೆ ಮೇಲಧಿಕಾರಿಗಳಿಗೆ ದೂರು ನೀಡಬಹುದು.
  • ಅಧಿಕಾರ ದುರುಪಯೋಗಪಡಿಸಿಕೊಳ್ಳುವ ಪೊಲೀಸರ ಮೇಲೆ ಬಿಎನ್ಎಸ್(BNS) ಸೆಕ್ಷನ್126, 127, 351 ಅಥವಾ ಐಪಿಸಿಸೆಕ್ಷನ್166 ರ ಅಡಿಯಲ್ಲಿ ಕ್ರಮ ಕೈಗೊಳ್ಳಬಹುದು. ಇಂತಹ ಸಂದರ್ಭದಲ್ಲಿ ಪೊಲೀಸರಿಗೆ ಕನಿಷ್ಠ ಎರಡು ವರ್ಷಗಳವರೆ ಜೈಲುಶಿಕ್ಷೆ ಆಗುವ ಅವಕಾಶವಿರುತ್ತದೆ.

ಪ್ರಮುಖ ಮಾಹಿತಿ:

ಅವಿವಾಹಿತ ಜೋಡಿಗಳಿಗೆ ಕೊಠಡಿ ನೀಡಬಾರದು ಎಂದು ಎಲ್ಲಿಯೂ ಕಾನೂನಿಲ್ಲ. ಹೋಟೆಲ್ ಮಾಲೀಕರು ಕೂಡ ನಿಯಮಗಳನ್ನು ಪಾಲಿಸುತ್ತಾ ರೂಮ್‌ಗಳನ್ನು ನೀಡಬಹುದು. ಆದ್ದರಿಂದ, ಕಾನೂನಿನ ಅರಿವಿದ್ದರೆ ಅನಗತ್ಯ ಕಿರುಕುಳದಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಬಹುದು.

ಸೂಚನೆ : ಆನ್ ಲೈನ್’ ನಲ್ಲಿ ಸಂಗ್ರಹಿಸಲಾದ ವಿಷಯವನ್ನು ಮಾಹಿತಿಗಾಗಿ ನೀಡಲಾಗಿದೆ. ಈ ಕುರಿತು ಅಧಿಕೃತ ಮಾಹಿತಿಗಾಗಿ ಕಾನೂನು ತಜ್ಞರು , ಅಧಿಕಾರಿಗಳ ಸಲಹೆ ಪಡೆಯುವುದು ಒಳಿತು.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular