ಕರ್ನಾಟಕ ರಾಜ್ಯದ ಪರಿವರ್ತನಾ ಸಂಸ್ಥೆ (ರಾಜ್ಯ ಯೋಜನಾ ಮಂಡಳಿ)ಯ ಉಪಾಧ್ಯಕ್ಷರಾಗಿ ಎಂ.ವಿ. ರಾಜೀವ್ ಗೌಡ ಅವರನ್ನು ನಿಯೋಜಿಸಿ ತಕ್ಷಣದಿಂದಲೇ ಅಧಿಕಾರಕ್ಕೆ ಬರುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಈ ಬಗ್ಗೆ ಸರ್ಕಾರದ ಅಧೀನ ಕಾರ್ಯದರ್ಶಿಗಳು ಆದೇಶ ಹೊರಡಿಸಿದ್ದು, ಪ್ರೋ. ಎಂ. ವಿ. ರಾಜೀವ್ ಗೌಡ, ಮಾನ್ಯ ಮಾಜಿ ರಾಜ್ಯಸಭಾ ಸದಸ್ಯರು, ಇವರನ್ನು ಉಪಾಧ್ಯಕ್ಷರು, ಕರ್ನಾಟಕ ರಾಜ್ಯ ಪರಿವರ್ತನಾ ಸಂಸ್ಥೆ (ಕರ್ನಾಟಕ ರಾಜ್ಯ ಯೋಜನಾ ಮಂಡಳಿ), ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಸಂಪುಟ ದರ್ಜೆ ಸಚಿವ ಸ್ನಾನಮಾನದೊಂದಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನೇಮಿಸಿ ಆದೇಶಿಸಲಾಗಿದೆ ಎಂದು ಆದೇಶ ಹೊರಡಿಸಿದ್ದಾರೆ.
ನಮ್ಮ ಪಕ್ಷದ ಮುಖಂಡರು, ರಾಜ್ಯಸಭೆಯ ಮಾಜಿ ಸದಸ್ಯರೂ ಆದ ಶ್ರೀ @rajeevgowda ಅವರು ರಾಜ್ಯ ಪರಿವರ್ತನಾ ಸಂಸ್ಥೆ (ರಾಜ್ಯ ಯೋಜನಾ ಮಂಡಳಿ)ಯ ಉಪಾಧ್ಯಕ್ಷರಾಗಿ ನೇಮಕವಾಗಿದ್ದಾರೆ. ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ತಮ್ಮ ಸುಧೀರ್ಘ ರಾಜಕೀಯ ಅನುಭವದಿಂದ ನೂತನ ಜವಾಬ್ದಾರಿಯನ್ನು ಸಹ ಯಶಸ್ವಿಯಾಗಿ ನಿರ್ವಹಿಸುವರೆಂಬ ವಿಶ್ವಾಸವಿದೆ.
I extend my… pic.twitter.com/bAgzRA4tjf
— M B Patil (@MBPatil) August 15, 2023
ಈ ಹಿನ್ನೆಲೆ ಕಾಂಗ್ರೆಸ್ ನಾಯಕರು . ರಾಜೀವ್ ಗೌಡರಿಗೆ ಶುಭ ಹಾರೈಸಿದ್ದಾರೆ. ನಮ್ಮ ಪಕ್ಷದ ಮುಖಂಡರು, ರಾಜ್ಯಸಭೆಯ ಮಾಜಿ ಸದಸ್ಯರೂ ಆದ ಶ್ರೀ ರಾಜೀವ್ ಗೌಡಅವರು ರಾಜ್ಯ ಪರಿವರ್ತನಾ ಸಂಸ್ಥೆ (ರಾಜ್ಯ ಯೋಜನಾ ಮಂಡಳಿ)ಯ ಉಪಾಧ್ಯಕ್ಷರಾಗಿ ನೇಮಕವಾಗಿದ್ದಾರೆ. ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ತಮ್ಮ ಸುಧೀರ್ಘ ರಾಜಕೀಯ ಅನುಭವದಿಂದ ನೂತನ ಜವಾಬ್ದಾರಿಯನ್ನು ಸಹ ಯಶಸ್ವಿಯಾಗಿ ನಿರ್ವಹಿಸುವರೆಂಬ ವಿಶ್ವಾಸವಿದೆ ಎಂದು ಸಚಿವ ಎಂಬಿ ಪಾಟೀಲ್ ಶುಭ ಹಾರೈಸಿದ್ದಾರೆ.