ತಲೆಯಲ್ಲಿ ಗಾಯವಾಗಿ ಕೂದಲು ಬೆಳೆಯುತ್ತಿಲ್ಲವೆಂದಾದ್ರೆ ಈ ಮನೆ ಮದ್ದನ್ನು ಹಚ್ಚಿ

ಕೆಲವರ ತಲೆಯಲ್ಲಿ ಗಾಯಗಳಾದಾಗ ಅಥವಾ ಇನ್ನಿತರ ಸಮಸ್ಯೆಯಿಂದ ಆ ಸ್ಥಳದಲ್ಲಿ ಕೂದಲು ಬೆಳೆಯುವುದಿಲ್ಲ, ಇದರಿಂದ ಅಲ್ಲಿ ಬೋಳಾಗಿ ಕಾಣಿಸುತ್ತದೆ. ಹಾಗಾಗಿ ಅಲ್ಲಿ ಕೂದಲು ಬೆಳೆಯಬೇಕೆಂದರೆ ಈ ಮನೆ ಮದ್ದನ್ನು ಬಳಸಿ.

*ಕೂದಲಿಗೆ ಅಲೋವೆರಾ ಜೆಲ್ ಬಳಸಿ. ಇದನ್ನು ಬಹಳ ಹಿಂದಿನ ಕಾಲದಿಂದಲೂ ಬಳಸುತ್ತಾ ಬಂದಿದ್ದಾರೆ. ಇದು ಕೂದಲು ಬೆಳೆಯಲು ಸಹಕರಿಸುತ್ತದೆ.

*ಈರುಳ್ಳಿಯನ್ನು ಕೂದಲಿನ ಚಿಕಿತ್ಸೆಯಲ್ಲಿ ಬಳಸುತ್ತಾರೆ. ಹಾಗಾಗಿ ಈರುಳ್ಳಿ ರಸವನ್ನು ಹಚ್ಚಿ ಆ ಸ್ಥಳದಲ್ಲಿ ಮಸಾಜ್ ಮಾಡಿ. 15 ನಿಮಿಷ ಬಿಟ್ಟು ವಾಶ್ ಮಾಡಿ.

*ಕೂದಲಿನ ಬೆಳೆವಣಿಗೆಗೆ ನಿಂಬೆ ರಸ ಮತ್ತು ನಿಂಬೆ ಎಣ್ಣೆ ಸಹಕಾರಿ. ಹಾಗಾಗಿ ನಿಂಬೆ ರಸವನ್ನು ಕೂದಲಿಗೆ ಹಚ್ಚಿ ಮಸಾಜ್ ಮಾಡಿ ಬಳಿಕ ಶಾಂಪು ಬಳಸಿ ವಾಶ್ ಮಾಡಿ.

*ಮೊಟ್ಟೆಯಲ್ಲಿ ಪ್ರೋಟೀನ್ ಮತ್ತು ಬಯೋಟಿನ್ ಸಮೃದ್ಧವಾಗಿದೆ. ಇದು ಕೂದಲಿನ ಬೆಳವಣಿಗೆಗೆ ಅಗತ್ಯವಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read