ಬೆಂಗಳೂರು : ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ 2026-27ನೇ ಸಾಲಿನಲ್ಲಿ ಅಕ್ಟೋಬರ್ 21 ರಂದು ನಡೆಯುವ ಮಹಾರಾಷ್ಟ್ರದ ನಾಗಪುರದ ಡಾ. ಬಿ.ಆರ್. ಅಂಬೇಡ್ಕರ್ ರವರ ದೀಕ್ಷಾಭೂಮಿಯಲ್ಲಿ ನಡೆಯುವ ಪ್ರವರ್ತನಾ ದಿನ (ವಿಜಯದಶಮಿ ದಿನ) ಈ ಕಾರ್ಯಕ್ರಮಕ್ಕೆ ಅವರ ಅನುಯಾಯಿ ಯಾತ್ರಾರ್ಥಿಗಳಿಗೆ ಭೇಟಿ ನೀಡಲು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಸಮುದಾಯದ ಡಾ. ಬಿ.ಆರ್. ಅಂಬೇಡ್ಕರ್ ಅನುಯಾಯಿಗಳಿಗೆ ಅವಕಾಶವನ್ನು ಕಲ್ಪಿಸಲಾಗಿದೆ .
ಆಸಕ್ತಿಯುಳ್ಳ ಅನುಯಾಯಿ ಯಾತ್ರಾರ್ಥಿಗಳಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಕೆ.ಎಸ್.ಆರ್.ಟಿ.ಸಿ ಮತ್ತು ಇತರೆ ಸಾರಿಗೆ ಬಸ್ಸು ಮತ್ತು ರೈಲಿನ ಮೂಲಕ ಪ್ರಯಾಣಿಸಲು ಆನ್ ಲೈನ್ ಮೂಲಕ ವೆಬ್ ಸೈಟ್ : https://swd.karnataka.gov.in/ ರಲ್ಲಿ ಅಕ್ಟೋಬರ್ 09 2026ರ ರವರೆಗೆ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಸಮಾಜ ಕಲ್ಯಾಣ ಇಲಾಖೆ, ಜಂಟಿ ನಿರ್ದೇಶಕರ ಕಛೇರಿ, ನಂ. 21 /1.1 ನೇ ಮಹಡಿ, ಜಲೇಟಾ ಟವರ್, ಮಿಷನ್ ರಸ್ತೆ ಸಂಪಂಗಿರಾಮನಗರ, ಬೆಂಗಳೂರು-27 ಅಥವಾ ದೂರವಾಣಿ ಸಂಖ್ಯೆ 080 – 22240449,ಇಮೇಲ್ -dswourban@gmail. com ಅನ್ನೋ ಸಂಪರ್ಕಿಸಬಹುದು ಎಂದು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗುಡ್ ಶೆಫರ್ಡ್ ಸೊಸೈಟಿ: ಹೆಣ್ಣು ಮಕ್ಕಳ ಪಾಲನಾ ಸಂಸ್ಥೆಯ ನೋಂದಣಿ ಮಾನ್ಯತೆ ರದ್ದು
ಬೆಂಗಳೂರು : ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಬೆಂಗಳೂರು ನಗರ ಜಿಲ್ಲೆ ಕೇಂದ್ರ ವ್ಯಾಪ್ತಿಯಲ್ಲಿ ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯ್ದೆ 2015ರ ಸೆಕ್ಷನ್ 41(1)ರಡಿ ನೋಂದಣಿ ಆಗಿರುವ ಗುಡ್ ಶೆಫರ್ಡ್ ಸೊಸೈಟಿ, ಹೆಣ್ಣು ಮಕ್ಕಳ ಪಾಲನಾ ಸಂಸ್ಥೆಯಲ್ಲಿ ಪಾಲನೆ ಮತ್ತು ರಕ್ಷಣೆ ಅಗತ್ಯವಿರುವ ಮಕ್ಕಳಿಲ್ಲದ ಕಾರಣ ಹಾಗೂ ಸಂಸ್ಥೆಯ ಮುಖ್ಯಸ್ಥರು ಸಂಸ್ಥೆಯನ್ನು ಮುಂದುವರೆಸಲು ಸಾಧ್ಯವಾಗದ ಕಾರಣ, ಸ್ವ ಇಚ್ಛೆಯಿಂದ ಆಫಿಡವಿಟ್ ಸಲ್ಲಿಸಿ ರದ್ದುಗೊಳಿಸಲು ಕೋರಿರುವುದರಿಂದ, ಗುಡ್ ಶೆಫರ್ಡ್ ಸೊಸೈಟಿ, ಹೆಣ್ಣು ಮಕ್ಕಳ ಪಾಲನಾ ಸಂಸ್ಥೆ, #25, ಮ್ಯೂಸಿಯಂ ರೋಡ್, ಬೆಂಗಳೂರು-560025. ಸದರಿ ಸಂಸ್ಥೆಯನ್ನು ಬಾಲನ್ಯಾಯ ಕಾಯ್ದೆ 2015 ಸೆಕ್ಷನ್ 41(7) ರನ್ವಯ ಪ್ರದತ್ತವಾದ ಅಧಿಕಾರ ಚಲಾಯಿಸಿ ಸದರಿ ಸಂಸ್ಥೆಯ ನೋಂದಣಿ ಮಾನ್ಯತೆಯನ್ನು ಮಾನ್ಯ ನಿರ್ದೇಶಕರು, ಮಕ್ಕಳ ರಕ್ಷಣಾ ನಿರ್ದೇಶನಾಲಯ, ಬೆಂಗಳೂರು ರವರು ದಿನಾಂಕ:09.09.2026ರಿಂದ ಅನ್ವಯವಾಗುವಂತೆ ರದ್ದುಗೊಳಿಸಿ ಆದೇಶ ಹೊರಡಿಸಲಾಗಿರುತ್ತಾರೆ.
ಮುಂದಿನ ದಿನಗಳಲ್ಲಿ ಗುಡ್ ಶೆಫರ್ಡ್ ಸೊಸೈಟಿ, ಹೆಣ್ಣು ಮಕ್ಕಳ ಪಾಲನಾ ಸಂಸ್ಥೆ, #25, ಮ್ಯೂಸಿಯಂ ರೋಡ್, ಬೆಂಗಳೂರು-560025. ಈ ವಿಳಾಸದ ಮಕ್ಕಳ ಪಾಲನಾ ಸಂಸ್ಥೆಯಲ್ಲಿ ಬಾಲನ್ಯಾಯ ಕಾಯ್ದೆ ಅನ್ವಯ ಪಾಲನೆ-ಪೋಷಣೆ ಹಾಗೂ ರಕ್ಷಣೆ ಅಗತ್ಯವಿರುವ ಮಕ್ಕಳನ್ನು ಇರಿಸಿಕೊಳ್ಳುವುದು ಅಥವಾ ದಾಖಲಿಸಿಕೊಳ್ಳುವುದು ಬಾಲನ್ಯಾಯ ಕಾಯ್ದೆ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಬೆಂಗಳೂರು ನಗರ ಕೇಂದ್ರ, ಡಾ. ಎಂ.ಹೆಚ್ ಮರಿಗೌಡ ರಸ್ತೆ, ಕಿದ್ವಾಯಿ ಆಸ್ಪತ್ರೆ ಪಕ್ಕ ಬೆಂಗಳೂರು-560029 ದೂರವಾಣಿ ಸಂಖ್ಯೆ:080-29919017 ಸಂಪರ್ಕಿಸಬಹುದು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಬೆಂಗಳೂರು ನಗರ ಕೇಂದ್ರ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

