‘ರಂಗಭೂಮಿ ತರಬೇತಿ’ ಪಡೆಯಲು ಆಸಕ್ತ ಮಕ್ಕಳಿಂದ ಅರ್ಜಿ ಆಹ್ವಾನ

ಶಿವಮೊಗ್ಗ : ಶಿವಮೊಗ್ಗ ರಂಗಾಯಣವು ಸುವರ್ಣ  ಸಂಸ್ಕೃತಿ ಭವನದಲ್ಲಿ ಜು. 21 ರಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.00ರವರೆಗೆ ಖ್ಯಾತ ಚಲನಚಿತ್ರ ನಟ ಪ್ರಕಾಶ್ ರೈರವರ ನಿರ್ದಿಗಂತ ತಂಡದ ಕಲಾವಿದರಿಂದ ಮಕ್ಕಳಿಗೆ ರಂಗಗೀತೆ, ಅಭಿನಯ ಗೀತೆಗಳು ಮತ್ತು ರಂಗಭೂಮಿಗೆ ಸಂಬಂಧಿಸಿದ ವಿವಿಧ ಚಟುವಟಿಕೆಗಳನ್ನು ಉಚಿತವಾಗಿ ಕಲಿಸಲಾಗುತ್ತದೆ.

ಆಸಕ್ತಿಯಿರುವ 8 ರಿಂದ 14 ವರ್ಷದ ಮಕ್ಕಳು ತಮ್ಮ ಹೆಸರನ್ನು ಮೊ. ಸಂ.:7975229166 ಕ್ಕೆ ವಾಟ್ಸಾಪ್ ಮೂಲಕ ಜು.19ರೊಳಗಾಗಿ ನೊಂದಾಯಿಸಿಕೊಳ್ಳುವುದು. ಮೊದಲು ಬಂದ 200 ಮಕ್ಕಳಿಗೆ ಮೊದಲ ಆದ್ಯತೆ ನೀಡಲಾಗುವುದು. ಅಂದು ಸಂಜೆ 6.30ಕ್ಕೆ ನಿರ್ದಿಗಂತ ತಂಡದಿಂದ ಮಕ್ಕಳಿಗಾಗಿ “ಬ್ಲಾಕ್ ಬಲೂನ್” ಎಂಬ ನಾಟಕ ಮತ್ತು ಪಪ್ಪೆಟ್ ಶೋಗಳನ್ನು ಪ್ರದರ್ಶಿಸಲಿದ್ದಾರೆ. ಪ್ರವೇಶ ಉಚಿತವಾಗಿರುತ್ತದೆ.

ಈ ಕಾರ್ಯಕ್ರಮಗಳಿಗೆ ಮಕ್ಕಳು, ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ರಂಗಾಯಣ ಆಡಳಿತಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read