HomeLatest Newsವಿಶೇಷ ಡಿ.ಇಡಿ ತರಬೇತಿಗೆ ಅರ್ಜಿ ಆಹ್ವಾನ

ವಿಶೇಷ ಡಿ.ಇಡಿ ತರಬೇತಿಗೆ ಅರ್ಜಿ ಆಹ್ವಾನ

ಕರ್ನಾಟಕ ಸರ್ಕಾರದ ವತಿಯಿಂದ ಮೈಸೂರಿನ ಅಂಧ ಹಾಗೂ ಶ್ರವಣದೋಷವುಳ್ಳ ಮಕ್ಕಳ ಶಿಕ್ಷಕರ ತರಬೇತಿ ಕೇಂದ್ರಕ್ಕೆ ಶಿಕ್ಷಕರಾಗಲು ಎರಡು ವರ್ಷಗಳ ವಿಶೇಷ ಡಿ.ಇಡಿ ತರಬೇತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಜು.12 ಕೊನೆಯ ದಿನಾಂಕವಾಗಿದೆ. ಅರ್ಜಿ ಸಲ್ಲಿಸುವವರು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.50(ಎಸ್‌ಸಿ, ಎಸ್‌ಟಿ ಮತ್ತು ವಿಕಲಚೇತನ ವಿದ್ಯಾರ್ಥಿಗಳಿಗೆ ಶೇ.45) ಅಂಕಗಳೊAದಿಗೆ ತೇರ್ಗಡೆಯಾಗಿರಬೇಕು. ಈ ತರಬೇತಿ ಕಾರ್ಯಕ್ರಮಗಳು ರೆಗ್ಯೂಲರ್ ಆಗಿದ್ದು, ವಿಕಲಚೇತನರು ಸೇರಿದಂತೆ ಸಾಮಾನ್ಯ ವಿದ್ಯಾರ್ಥಿಗಳು ಸಹ ಅರ್ಜಿ ಸಲ್ಲಿಸಬಹುದಾಗಿದೆ.

https://nber-rehabcouncil.gov.in ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ತರಬೇತಿಗಳು ಸಂಪೂರ್ಣವಾಗಿ ಉಚಿತವಾಗಿದ್ದು, ಯಾವುದೇ ಬೋಧನ ಶುಲ್ಕ ಇರುವುದಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಡಿ.ಇಡಿ.ಎಸ್‌ಪಿಲ್.ಇಡಿ(VI)- ಹೆಲೆನ್ ಕೆಲ್ಲರ್ ಸರ್ಕಾರಿ ಟೀಚರ್ ಟ್ರೆöÊನಿಂಗ್ ಸೆಂಟರ್ ಫಾರ್ ವಿಜುಯಲಿ ಹ್ಯಾಂಡಿಕ್ಯಾಪ್ಡ್-ಕೆಕೆ016, ಡಿ.ಇಡಿ.ಎಸ್‌ಪಿಎಲ್.ಇಡಿ(HI)- ಗವರ್ನ್ಮೆಂಟ್ ಟೀಚರ್ ಟ್ರೆöÊನಿಂಗ್ ಸೆಂಟರ್ ಫಾರ್ ಇಯರಿಂಗ್ ಹ್ಯಾಂಡಿಕ್ಯಾಪ್ಡ್-ಕೆಕೆ015 ತರಬೇತಿ ಕಾರ್ಯಕ್ರಮ ನಡೆಸಲಾಗುತ್ತದೆ.

ಈ ತರಬೇತಿಯನ್ನು ಪಡೆದರೆ, ರಾಜ್ಯ ಸರ್ಕಾರದ ಸಾಮಾನ್ಯ ಶಾಲೆ ಮತ್ತು ವಿಶೇಷ ಶಾಲೆಗಳರಡರಲ್ಲೂ ಶಿಕ್ಷಕರಾಗಬಹುದು. ವಿಕಲಚೇತನರ ಇಲಾಖೆಯ ಅಡಿಯಲ್ಲಿ ಬರುವ ಸರ್ಕಾರಿ/ಅನುದಾನಿತ ಶಾಲೆಗಳಲ್ಲಿ ಶಿಕ್ಷಕರಾಗಬಹುದು. ಸಿಬಿಎಸ್‌ಸಿ ಶಾಲೆಗಳಲ್ಲಿ ಶಿಕ್ಷಕರಾಗಬಹುದು, ಸರ್ವ ಶಿಕ್ಷಣ ಅಭಿಯಾನದಲ್ಲಿ ಸಂಪನ್ಮೂಲ ಶಿಕ್ಷಕರಾಗಬಹುದು. ಜಿಲ್ಲಾ ಆಸ್ಪತ್ರೆಗಳಲ್ಲಿ ಸಂಪನ್ಮೂಲ ವ್ಯಕ್ರಿಗಳಾಗಿ ಕಾರ್ಯ ನಿರ್ವಹಿಸಬಹುದು. ಜಿಲ್ಲಾ ಆಸ್ಪತ್ರೆಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯ ನಿರ್ವಹಿಸಬಹುದು. ರಾಷ್ಟಿçÃಯ ಸಂಸ್ಥೆಗಳು/ಪ್ರಾದೇಶಿಕ ಸಂಸ್ಥೆಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಿಸಬಹುದು. ಮಾತಿನ ತರಬೇತಿ ಘಟಕದಲ್ಲೂ ಕಾರ್ಯ ನಿರ್ವಹಿಸಬಹುದು.

ಹೆಚ್ಚಿನ ಮಾಹಿತಿಗಾಗಿ ದೂ.ಸಂ 0821 2491600 ಹಾಗೂ ತರಬೇತಿ ಸಂಯೋಜಕರಾದ ಆಶಾ.ವಿ ಹಿರೇಮಠ್-9113561620, ಟಿ.ಡಿ.ಮಂಜುನಾಥ್-9686762378 ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular