HomeKarnatakaಗಮನಿಸಿ : ಬೆಂಗಳೂರಿನಲ್ಲಿ ಗೃಹರಕ್ಷಕ ದಳದ ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಗಮನಿಸಿ : ಬೆಂಗಳೂರಿನಲ್ಲಿ ಗೃಹರಕ್ಷಕ ದಳದ ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಬೆಂಗಳೂರು ನಗರ ಜಿಲ್ಲೆ : ಜಿಲ್ಲಾ ಗೃಹರಕ್ಷಕ ದಳ, ಬೆಂಗಳೂರು ದಕ್ಷಿಣ ಜಿಲ್ಲೆ, ಇಲ್ಲಿ ಖಾಲಿ ಇರುವ ಗೃಹರಕ್ಷಕ ಸ್ವಯಂ ಸೇವಾ ಸದಸ್ಯರ ಸ್ಥಾ ನಗಳನ್ನು ಭರ್ತಿ ಮಾಡಲು ಬೆಂಗಳೂರು ನಗರದ ಸ್ಥಳೀಯ ಆಸಕ್ತ ನಾಗರಿಕರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ವಿದ್ಯಾರ್ಹತೆ: ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು. ಕನಿಷ್ಠ 19 ವರ್ಷ ಹಾಗೂ ಗರಿಷ್ಠ 45 ವರ್ಷಗಳ ವಯೋಮಿತಿ ಒಳಗಿರಬೇಕು. ಬೆಂಗಳೂರು ನಗರದ ಸ್ಥಳೀಯ ನಾಗರಿಕರು (ವಾಸ ಸ್ಥಿಳದ ಅಧಿಕೃತ ದಾಖಲೆ ಹೊಂದಿರಬೇಕು) ಬೆಂಗಳೂರು ದಕ್ಷಿಣ ಜಿಲ್ಲಾ ಕಛೇರಿಯ ವ್ಯಾಪ್ತಿಗೆ ಒಳಪಡುವ ವಿಳಾಸದಲ್ಲಿ ವಾಸವಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಗೃಹರಕ್ಷಣೆ ಸದಸ್ಯತ್ವವು ಖಾಯಂ ಹುದ್ದೆ ಆಗಿರುವುದಿಲ್ಲ.

ಗೃಹ ರಕ್ಷಕ ಸದಸ್ಯತ್ವ ಅರ್ಜಿ ನಮೂನೆಗಳನ್ನು ಸಮಾದೇಷ್ಟರವರ ಕಛೇರಿ, ಗೃಹರಕ್ಷಕ ದಳ, ಬೆಂಗಳೂರು ದಕ್ಷಿಣ ಜಿಲ್ಲೆ, ಶೇಷಾದ್ರಿ ರಸ್ತೆ, ಫ್ರೀಡಂ ಪಾರ್ಕ್ ಹತ್ತಿರ, ಬೆಂಗಳೂರು ಇಲ್ಲಿ ಸೆಪ್ಟೆಂಬರ್ 11 ರಿಂದ 25 ರವರೆಗೆ (ಕೆಲಸದ ದಿನಗಳಲ್ಲಿ) ಉಚಿತವಾಗಿ ವೀತರಿಸಲಾಗುವುದು.ಅರ್ಜಿಯನ್ನು ಪಡೆಯಲು ಅಭ್ಯರ್ಥಿಯು ಎಸ್.ಎಸ್.ಎಲ್.ಸಿ ಅಂಕಪಟ್ಟಿ, ಸ್ಥಳೀಯ ವಾಸ ಸ್ಥಾಳದ ದಾಖಲೆಯ ಆಧಾರ್ ಕಾರ್ಡ್/ ಚುನಾವಣಾ ಗುರುತಿನ ಚೀಟಿ / ಇತ್ತೀಚಿನ ಗ್ಯಾಸ್ ರಸೀದಿ – ಮೂಲ ಪ್ರತಿಗಳನ್ನು ಹಾಜರುಪಡಿಸಿ ಅರ್ಜಿ ಪಡೆಯಬಹುದು.ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : 080-22261012 ಗೆ ಸಂಪರ್ಕಿಸಬಹುದು ಎಂದು ಬೆಂಗಳೂರು ದಕ್ಷಿಣ ಜಿಲ್ಲೆಯ ಗೃಹರಕ್ಷಕ ದಳದ ಕಮಾಂಡೆಂಟ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ .

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular