ಬೆಂಗಳೂರು ನಗರ ಜಿಲ್ಲೆ : ಜಿಲ್ಲಾ ಪೊಲೀಸ್ ದೂರುಗಳ ಪ್ರಾಧಿಕಾರಕ್ಕೆ Retired Civil Service Officer not below the rank of Assistant Commissioner ನಾಗರೀಕ ಸೇವಾ ಹುದ್ದೆಗೆ ಒಬ್ಬ ಸದಸ್ಯರನ್ನು ನೇಮಕ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ನೇಮಕಗೊಳ್ಳಲು ಬಯಸುವ ಸದಸ್ಯರು ಸಹಾಯಕ ಆಯುಕ್ತರ ಹುದ್ದೆಗಿಂತ ಕಡಿಮೆ ಇಲ್ಲದ ನಿವೃತ್ತ ನಾಗರೀಕ ಸೇವಾ ಅಧಿಕಾರಿಯಾಗಿದ್ದು, ದೈಹಿಕ/ಮಾನಸಿಕವಾಗಿ ವಿಚಾರಣೆ ಸಮಯದಲ್ಲಿ ಹಾಜರಿರಲು ಸಧೃಡರಾಗಿರಬೇಕು ಹಾಗೂ ಯಾವುದೇ ರಾಜಕೀಯ ಸೈದ್ಧಾಂತಿಕ ಪಕ್ಷದೊಂದಿಗೆ ಗುರುತಿಸಿಕೊಂಡಿರಬಾರದು.
ಆಸಕ್ತಿಯುಳ್ಳ ಸಾರ್ವಜನಿಕರು ಪ್ರಕಟಣೆಗೊಂಡ 7 ದಿನಗಳ ಒಳಗಾಗಿ ಜಿಲ್ಲಾಧಿಕಾರಿಗಳು, ಬೆಂಗಳೂರು ನಗರ ಜಿಲ್ಲೆ, ಕೆ.ಜಿ ರಸ್ತೆ, ಬೆಂಗಳೂರು ಇಲ್ಲಿ ವೈಯಕ್ತಿಕ ವಿವರಗಳೊಂದಿಗೆ (ಬಯೋಡೇಟಾ) ಅರ್ಜಿ ಸಲ್ಲಿಸಬಹುದಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಜಿ. ಜಗದೀಶ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

