HomeLatest Newsಪೋಷಕರೇ ಗಮನಿಸಿ : ರಾಷ್ಟ್ರೀಯ 'ಇಂಡಿಯನ್ ಮಿಲಿಟರಿ' ಕಾಲೇಜಿನಲ್ಲಿ 8 ನೇ ತರಗತಿ ಪ್ರವೇಶ ಪರೀಕ್ಷೆಗೆ...

ಪೋಷಕರೇ ಗಮನಿಸಿ : ರಾಷ್ಟ್ರೀಯ ‘ಇಂಡಿಯನ್ ಮಿಲಿಟರಿ’ ಕಾಲೇಜಿನಲ್ಲಿ 8 ನೇ ತರಗತಿ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ

ಶಿವಮೊಗ್ಗ :   ಜುಲೈ 2026ನೇ ಅಧಿವೇಶನಕ್ಕಾಗಿ ‘ಡೆಹರಾಡೂನ್’ ನಲ್ಲಿರುವ ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜ್‌ನಲ್ಲಿ 8 ತರಗತಿಗಾಗಿ ಪ್ರವೇಶ ಬಯಸುವ ಕರ್ನಾಟಕ ರಾಜ್ಯದ ಬಾಲಕ ಮತ್ತು ಬಾಲಕಿಯರಿಗೆ ಅರ್ಹತಾ ಪ್ರವೇಶ ಪರೀಕ್ಷೆಯು ದಿನಾ 07-12-2025 ರಂದು ಬೆಂಗಳೂರು ಕೇಂದ್ರದಲ್ಲಿ ನಡೆಯಲಿದ್ದು, 7ನೇ ತರಗತಿ ಓದುತ್ತಿರುವ ಅಥವಾ ಉತ್ತೀರ್ಣರಾಗಿರುವ ಜುಲೈ 2026ಕ್ಕೆ 11 1/2 ವರ್ಷದಿಂದ 13 ವರ್ಷದೊಳಗಿರುವ ಬಾಲಕ ಮತ್ತು ಬಾಲಕಿಯರು ಭರ್ತಿ ಮಾಡಿದ ನಿಗದಿತ ನಮೂನೆಯ ಅರ್ಜಿಯನ್ನು ದ್ವಿಪ್ರತಿಯಲ್ಲಿ ಅ.15 ರೊಳಗೆ ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಬೆಂಗಳೂರು-560025 ಇವರಿಗೆ ಸಲ್ಲಿಸಬಹುದೆಂದು ಹಾಗೂ ಹೆಚ್ಚಿನ ಮಾಹಿತಿಗಾಗಿ ಬೆಂಗಳೂರು ನಿರ್ದೇಶನಾಲಯದ ದೂ. ಸಂ. : 080-25589459 ಹಾಗೂ ಜಾಲತಾಣ: www.rimc.gov.in ಅಥವಾ ಹತ್ತಿರದ ಸೈನಿಕ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಕಛೇರಿಯನ್ನು ಸಂಪರ್ಕಿಸಬಹುದಾಗಿದೆಯೆಂದು ಉಪ ನಿರ್ದೇಶಕರು(ಪ್ರಭಾರ), ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಶಿವಮೊಗ್ಗ ಇವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular