ವಾಷಿಂಗ್ಟನ್: ಅಮೆರಿಕ ನ್ಯಾಯಾಲಯದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಹಿನ್ನಡೆಯಾಗಿದೆ. ಜನ್ಮಸಿದ್ಧ ಪೌರತ್ವವನ್ನು ಕೊನೆಗೊಳಿಸುವ ನಿರ್ಧಾರ ಅಸಂವಿಧಾನಿಕ ಎಂದು ಹೇಳಲಾಗಿದೆ.
ಟ್ರಂಪ್ ಸರ್ಕಾರ ಕೈಗೊಂಡಿರುವ ನಿರ್ಧಾರ ಸಾಂವಿಧಾನಾತ್ಮಕವಲ್ಲ ಎಂದು ಜನ್ಮಸಿದ್ಧ ಪೌರತ್ವ ವಿಚಾರದ ಬಗ್ಗೆ ಅಮೆರಿಕ ನ್ಯಾಯಾಲಯ ತೀರ್ಪು ನೀಡಿದೆ.
ಅಮೆರಿಕದಲ್ಲಿ ಕಾನೂನುಬಾಹಿರವಾಗಿ ನೆಲೆಸಿರುವ ಜನರು ಅಥವಾ ತಾತ್ಕಾಲಿಕವಾಗಿ ನೆಲೆಸಿರುವವರ ಪೌರತ್ವ ನಿರಾಕರಿಸುವ ನಿಯಮಕ್ಕೆ ತಡೆ ನೀಡಲಾಗಿದೆ. ಟ್ರಂಪ್ ಜಾರಿಗೊಳಿಸಿದ ಜನ್ಮಸಿದ್ಧ ಪೌರತ್ವ ನಿರಾಕರಣೆ ಜಾರಿಗೆ ಕೋರ್ಟ್ ತಡೆ ನೀಡಿ ಹ್ಯಾಂಪ್ ಶೈರ್ ಫೆಡರಲ್ ಕೋರ್ಟ್ ತೀರ್ಪು ನೀಡಿದೆ.
ಟ್ರಂಪ್ ಅವರ ಜನ್ಮಸಿದ್ಧ ಪೌರತ್ವವನ್ನು ನಿರ್ಬಂಧಿಸುವ ಪ್ರಯತ್ನವನ್ನು ಮೇಲ್ಮನವಿ ನ್ಯಾಯಾಲಯ ತಡೆಹಿಡಿದಿದೆ. ಸ್ವಯಂಚಾಲಿತ ಜನ್ಮಸಿದ್ಧ ಪೌರತ್ವವನ್ನು ಮೊಟಕುಗೊಳಿಸುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಾರ್ಯನಿರ್ವಾಹಕ ಆದೇಶವು ಅಸಂವಿಧಾನಿಕವಾಗಿದೆ ಎಂದು ಫೆಡರಲ್ ಮೇಲ್ಮನವಿ ನ್ಯಾಯಾಲಯವು ಬುಧವಾರ ತೀರ್ಪು ನೀಡಿದ್ದು, ರಾಷ್ಟ್ರವ್ಯಾಪಿ ಅದರ ಜಾರಿಯನ್ನು ನಿರ್ಬಂಧಿಸಿದೆ.