ಖ್ಯಾತ ನಿರೂಪಕಿ ಅಪರ್ಣಾ ಕೊನೆ ಆಸೆ ಬಗ್ಗೆ ಪತಿ ನಾಗರಾಜ್ ವಸ್ತಾರೆ ಮಾಹಿತಿ

ಬೆಂಗಳೂರು: ಖ್ಯಾತ ನಿರೂಪಕಿ ಮತ್ತು ನಟಿ ಅಪರ್ಣಾ ಅವರು ಕ್ಯಾನ್ಸರ್ ನಿಂದ ನಿಧನರಾಗಿದ್ದಾರೆ. ಜುಲೈ 12ರಂದು ರಾತ್ರಿ 9:30ರ ಸುಮಾರಿಗೆ ಅಪರ್ಣಾ ಇಹಲೋಕ ತ್ಯಜಿಸಿದ್ದಾರೆ ಎಂದು ಅವರ ಪತಿ ನಾಗರಾಜ್ ವಸ್ತಾರೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ಶ್ವಾಸಕೋಶದ ಕ್ಯಾನ್ಸರ್ ಕಾಯಿಲೆ ನಾಲ್ಕನೇ ಹಂತದಲ್ಲಿತ್ತು. ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಸೋತಿದ್ದೇವೆ. ನಾವು ಖಾಸಗಿಯಾಗಿ ಬದುಕಿದವರು. ಖಾಸಗಿಯಾಗಿ ಬೀಳ್ಕೊಡಲು ಬಯಸುತ್ತೇನೆ ಎಂದು ನಾಗರಾಜ್ ವಸ್ತಾರೆ ತಿಳಿಸಿದ್ದಾರೆ.

ನನಗಿಂತ ಮೊದಲು ಅಪರ್ಣಾ ಕರ್ನಾಟಕಕ್ಕೆ ಸೇರಿದವಳು. ಏನಾಯಿತು ಎಂದು ಮಾಧ್ಯಮದ ಮುಂದೆ ಹೇಳುವಂತೆ ನನಗೆ ತಿಳಿಸಿದ್ದಳು. ಎರಡು ವರ್ಷಗಳ ಹಿಂದೆಯೇ ಕಳೆದ ಜುಲೈನಲ್ಲಿ ಅಪಾರ ಅವರಿಗೆ ತಪಾಸಣೆಯ ಸಂದರ್ಭದಲ್ಲಿ ಶ್ವಾಸಕೋಶದ ಕ್ಯಾನ್ಸರ್ ಇರುವುದು ಗೊತ್ತಾಗಿದ್ದು, ಅದು ಆಗಲೇ ನಾಲ್ಕನೇ ಹಂತದಲ್ಲಿತ್ತು. ವೈದ್ಯರು ಇನ್ನು ಆರು ತಿಂಗಳು ಬದುಕಬಹುದು ಎಂದು ನಮಗೆ ತಿಳಿಸಿದ್ದರು. ಆದರೆ, ದೊಡ್ಡ ಛಲಗಾತಿಯಾಗಿದ್ದ ಅಪರ್ನಾ ಒಂದೂವರೆ ವರ್ಷಗಳ ಕಾಲ ಕ್ಯಾನ್ಸರ್ ವಿರುದ್ಧ ಹೋರಾಡಿದರು.

ದೇಹವೇ ದೇಹವನ್ನು ಬಾಧಿಸುವ ವ್ಯಾಧಿ ಇದಾಗಿದೆ. ಕ್ಯಾನ್ಸರ್ ವಿರುದ್ಧ ಹೋರಾಟ ನಡೆಸಿದೆವು. ಕಳೆದ ಜನವರಿಯಿಂದ ಆಕೆ ಕ್ಯಾನ್ಸರ್ ವಿರುದ್ಧ ಹೋರಾಡುವಲ್ಲಿ ಸೋತರು. ಈ ಜಂಟಿ ಹೋರಾಟದಲ್ಲಿ ನಾವಿಬ್ಬರೂ ಸೋತಿದ್ದೇವೆ. ಬರುವ ಅಕ್ಟೋಬರ್ ವೇಳೆಗೆ ಅಪರ್ಣಾಗೆ 58 ವರ್ಷವಾಗುತ್ತಿತ್ತು. ವಯಸ್ಸಾಗಿದೆ ಎಂದು ಅಪರ್ಣಾ ಎಂದಿಗೂ ತೋರಿಸಿಕೊಳ್ಳಲಿಲ್ಲ. ಅದೇ ರೀತಿಯೇ ಬದುಕಿದ್ದರು ಎಂದು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read