ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿನಿಯನ್ನೇ ಕರೆದೊಯ್ದು ಮದುವೆಯಾದ ಶಿಕ್ಷಕ ಅರೆಸ್ಟ್

ಚಿತ್ತೂರು: ಆಂಧ್ರಪ್ರದೇಶದ ಚಿತ್ತೂರಿನಲ್ಲಿ ಅಪ್ರಾಪ್ತ ವಿದ್ಯಾರ್ಥಿಯನ್ನು ಮದುವೆಯಾದ ಶಿಕ್ಷಕನನ್ನು ಪೋಕ್ಸೋ ಅಡಿಯಲ್ಲಿ ಬಂಧಿಸಲಾಗಿದೆ.

ಚಿತ್ತೂರು ಜಿಲ್ಲೆಯ ಗಂಗಾವರಂ ಮಂಡಲ್ ಪ್ರದೇಶದಲ್ಲಿ ಶಿಕ್ಷಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಶಿಕ್ಷಕ ಚಲಪತಿ(33) ವಿರುದ್ಧ ಮಕ್ಕಳ ಲೈಂಗಿಕ ಅಪರಾಧಗಳ ರಕ್ಷಣೆ(ಪೋಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಯು ಖಾಸಗಿ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದಾನೆ. ಆರೋಪಿಗೆ ಈಗಾಗಲೇ ಮದುವೆಯಾಗಿದ್ದು, ಓರ್ವ ಮಗಳಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. 12ನೇ ತರಗತಿಯಲ್ಲಿ ಓದುತ್ತಿರುವ 17 ವರ್ಷದ ಬಾಲಕಿಯನ್ನು ಮದುವೆಯಾಗಿದ್ದಾನೆ.

ಬುಧವಾರ ಬಾಲಕಿಗೆ ಅಂತಿಮ ಪರೀಕ್ಷೆ ಇದ್ದು, ಪರೀಕ್ಷೆ ಮುಗಿದ ಬಳಿಕ ಆರೋಪಿ ಚಲಪತಿ ಸುಳ್ಳು ಹೇಳಿ ಬಾಲಕಿಯನ್ನು ತಿರುಪತಿಗೆ ಕರೆದುಕೊಂಡು ಹೋಗಿದ್ದ. ಆರೋಪಿಯು ಬಾಲಕಿಗೆ ತಾನು ಪ್ರಾಮಾಣಿಕನಾಗಿದ್ದು, ತನ್ನನ್ನು ನಂಬುವಂತೆ ಆಕೆಯನ್ನು ಕೇಳಿಕೊಂಡಿದ್ದಾನೆ ಮತ್ತು ನಾನು ಅವಳನ್ನು ನೋಡಿಕೊಳ್ಳುತ್ತೇನೆ ಎಂದು ಎಸ್‌ಐ ಸುಧಾಕರ್ ರೆಡ್ಡಿ ತಿಳಿಸಿದ್ದಾರೆ.

ಅವರಿಬ್ಬರೂ ಅಲ್ಲಿರುವ ದೇವಸ್ಥಾನದಲ್ಲಿ ಮದುವೆಯಾದರು, ನಂತರ, ಹುಡುಗಿ ಚಲಪತಿಯ ವರ್ತನೆಯಲ್ಲಿ ಬದಲಾವಣೆಯನ್ನು ಗಮನಿಸಿದಳು. ನಂತರ ಹುಡುಗಿ ತನ್ನ ಪೋಷಕರಿಗೆ ಸಂಪೂರ್ಣ ಘಟನೆಯ ಬಗ್ಗೆ ತಿಳಿಸಿದಳು, ನಂತರ ಗುರುವಾರ ರಾತ್ರಿ ತನ್ನ ಹೆತ್ತವರೊಂದಿಗೆ ಬಾಲಕಿ ಗಂಗವರಂ ಪೊಲೀಸ್ ಠಾಣೆಗೆ ತಲುಪಿ ಎಫ್ಐಆರ್ ದಾಖಲಿಸಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read