HomeKarnatakaBIG NEWS: ಅಂತರಗಂಗೆ ಬೆಟ್ಟದ ಮೇಲೆ ವಿವಾದಾತ್ಮಕ ಬರಹ; ಓರ್ವ ಆರೋಪಿ ಅರೆಸ್ಟ್

BIG NEWS: ಅಂತರಗಂಗೆ ಬೆಟ್ಟದ ಮೇಲೆ ವಿವಾದಾತ್ಮಕ ಬರಹ; ಓರ್ವ ಆರೋಪಿ ಅರೆಸ್ಟ್

ಕೋಲಾರ: ಅಂತರಗಂಗೆ ಬೆಟ್ಟದ ಬಂಡೆಯ ಮೇಲೆ ಹಸಿರು ಹಾಗೂ ಬಿಳಿ ಪೇಂಟ್ ನಲ್ಲಿ ವಿವಾದಾತ್ಮಕ ಬರಹಗಳನ್ನು ಬರೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

ಪಾಪರಾಜನಹಳ್ಳಿಯ ಅನ್ವರ್ ಅಲಿಯಾಸ್ ಪ್ಯಾರೇಜಾನ್ ಬಂಧಿತ ಆರೋಪಿ. ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲಿ ಗುಹೆ ನಿರ್ಮಾಣ ಮಾಡಿಕೊಂಡು ಬಂಡೆಗಳ ಮೇಲೆ ವಿವಾದಾತ್ಮಕ ಬರಹಗಳನ್ನು ಬರೆದಿದ್ದ. ಈ ಬಗ್ಗೆ ಕೋಲಾರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಂಧಿತ ಆರೋಪಿ ಅಂತರಗಂಗೆ ಬೆಟ್ಟದ ಹಲವು ಬಂಡೆಗಳ ಮೇಲೆ ಇಸ್ಲಾಂ ಧರ್ಮಕ್ಕೆ ಸಂಬಂಧಿಸಿದ ಹಾಗೂ ಅಲ್ಲಾಹುಗೆ ಸಂಬಂಧಿಸಿದ ಬರಹಗಳನ್ನು ಬರೆದಿದ್ದಾನೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular