HomeEntertainmentನಿಶಾ ರವಿಕೃಷ್ಣನ್ ನಟನೆಯ 'ಅಂಶು' ಚಿತ್ರದ ಮತ್ತೊಂದು ಹಾಡು ರಿಲೀಸ್

ನಿಶಾ ರವಿಕೃಷ್ಣನ್ ನಟನೆಯ ‘ಅಂಶು’ ಚಿತ್ರದ ಮತ್ತೊಂದು ಹಾಡು ರಿಲೀಸ್

‘ಗಟ್ಟಿಮೇಳ’ ಧಾರಾವಾಹಿ ಖ್ಯಾತಿಯ ನಿಶಾ ರವಿಕೃಷ್ಣನ್ ಅಭಿನಯದ ಬಹುನಿರೀಕ್ಷಿತ ‘ಅಂಶು’ ಚಿತ್ರದ ಮತ್ತೊಂದು ಹಾಡು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ‘ಮನವೇ ಇರುಳ ಕಾನನ’ ಎಂಬ ಈ ಹಾಡಿಗೆ ಸುನಿಧಿ ಗಣೇಶ್ ಮತ್ತು  ಜ್ಯೋತ್ಸ್ನಾ ಭಾರದ್ವಾಜ್ ಧ್ವನಿಯಾಗಿದ್ದು, ಕೆ ಸಿ ಬಾಲ ಸಾರಂಗನ್ ಸಂಗೀತ ಸಂಯೋಜನೆ ನೀಡಿದ್ದಾರೆ. ಇನ್ನುಳಿದಂತೆ ಮಹೇಂದ್ರ ಗೌಡ ಅವರ ಸಾಹಿತ್ಯವಿದೆ.

ಎಂ ಸಿ  ಚೆನ್ನಕೇಶವ ಆಕ್ಷನ್ ಕಟ್ ಹೇಳಿರುವ ಮಹಿಳಾ ಪ್ರಧಾನ  ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ನಿಶಾ ರವಿಕೃಷ್ಣನ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದು, ಗ್ರಹಣ ಸ್ಟುಡಿಯೋಸ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡಲಾಗಿದೆ. ಅದಿತಿ ನಾರಾಯಣ್  ನೃತ್ಯ ನಿರ್ದೇಶನ, ಮಹೇಂದ್ರ ಗೌಡ ಅವರ ಸಂಭಾಷಣೆ ಇದೆ.

For Latest News Updates, Join Our Whatsapp Community🚩
RELATED ARTICLES

Most Popular