HomeEntertainment'ಸಿ' ಚಿತ್ರದಿಂದ ಬಂತು ಮತ್ತೊಂದು ಗೀತೆ

‘ಸಿ’ ಚಿತ್ರದಿಂದ ಬಂತು ಮತ್ತೊಂದು ಗೀತೆ

ಕಿರಣ್ ಸುಬ್ರಮಣಿ ನಿರ್ದೇಶಿಸಿ ನಟಿಸಿರುವ ಬಹು ನಿರೀಕ್ಷಿತ ಸಿ ಚಿತ್ರದ ಹುಣ್ಣಿಮೆಗೆ ಎಂಬ ಲಿರಿಕಲ್ ಹಾಡು youtube ನಲ್ಲಿ ಬಿಡುಗಡೆಯಾಗಿದೆ. ಅನುರಾಧಾ ಭಟ್ ಈ ಹಾಡಿಗೆ ಧ್ವನಿಯಾಗಿದ್ದು, ಎಬಿ ಮುರಳೀಧರನ್ ಸಂಗೀತ ಸಂಯೋಜನೆ ನೀಡಿದ್ದಾರೆ. ವಿನಯ್ ರಾಜ್ ಅವರ ಸಾಹಿತ್ಯವಿದೆ.

ಈ ಚಿತ್ರವನ್ನು ಎ ಜಿ ಎಸ್ ಕ್ರಿಯೇಶನ್ಸ್ ಬ್ಯಾನರ್ ನಲ್ಲಿ ag ಸುಬ್ರಮಣಿ ನಿರ್ಮಾಣ ಮಾಡಿದ್ದು, ಮ್ಯಾಕಿನ್, ಸಯೂರಿ, ಎಬಿ ಮುರಳೀಧರನ್ ಸಹ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ. ಕಿರಣ್ ಸುಬ್ರಮಣಿ ಹಾಗೂ ಸಾನ್ವಿ ಸೇರಿದಂತೆ ಪ್ರಶಾಂತ್ ನಟನಾ, ಶ್ರೀಧರ್ ರಾಮ್, ಆರ್ಯ, ಶ್ರೀಕಾಂತ್ ಪಾಟೀಲ್, ಮಧುಮಿತಾ, ಚೈತ್ರ, ನಿರ್ಮಲಾ ನಾದನ್ ಬಣ್ಣ ಹಚ್ಚಿದ್ದಾರೆ. ನವೀನ್ ಸುಂದರ್ ರಾವ್ ಸಂಕಲನ,  ನವೀನ್ ಸೂರ್ಯ, ವೀರೇಶ್ ಕುಮಾರ್ ಅವರ ಛಾಯಾಗ್ರಹಣ, ಶಿವು ಎಸ್ ಸಾಹಸ ನಿರ್ದೇಶನ, ವಿನಯ್ ರಾಜ್ ಮತ್ತು ನವೀನ್ ಸುಂದರ್ ರಾವ್ ಅವರ ಸಂಭಾಷಣೆ, ಗೀತಾ ಹಾಗೂ ಬಾಲ ನೃತ್ಯ ನಿರ್ದೇಶನವಿದೆ.

For Latest News Updates, Join Our Whatsapp Community🚩
RELATED ARTICLES

Most Popular