HomeLatest NewsSHOCKING : ರಾಜ್ಯದಲ್ಲಿ ಮತ್ತೊಂದು ಬೆಚ್ಚಿ ಬೀಳಿಸೋ ಕೃತ್ಯ : ಮದ್ಯದ ಅಮಲಿನಲ್ಲಿ ಮಗನನ್ನೇ ಕೊಚ್ಚಿ...

SHOCKING : ರಾಜ್ಯದಲ್ಲಿ ಮತ್ತೊಂದು ಬೆಚ್ಚಿ ಬೀಳಿಸೋ ಕೃತ್ಯ : ಮದ್ಯದ ಅಮಲಿನಲ್ಲಿ ಮಗನನ್ನೇ ಕೊಚ್ಚಿ ಕೊಂದ ತಂದೆ.!

ಚಿಕ್ಕಮಗಳೂರು : ರಾಜ್ಯದಲ್ಲಿ ಬೆಚ್ಚಿ ಬೀಳಿಸೋ ಕೃತ್ಯ ವರದಿಯಾಗಿದ್ದು, ಮದ್ಯದ ನಶೆಯಲ್ಲಿ ತಂದೆ ಮಗನನ್ನೇ ಕೊಚ್ಚಿ ಕೊಂದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

ಕ್ಷುಲ್ಲಕ ಕಾರಣಕ್ಕೆ ತಂದೆ ಮಗನ ನಡುವೆ ಜಗಳ ನಡೆದು ಗಲಾಟೆ ಕೊಲೆ ಹಂತಕ್ಕೆ ತಿರುಗಿದೆ. ಚಿಕ್ಕಮಗಳೂರು ಜಿಲ್ಲೆಯ ಆನೆಗುಂಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಪ್ರದೀಪ್ ಎಂಬ ಯುವಕನನ್ನು ತಂದೆ ರಮೇಶ್ ಎಂಬುವವರು ಕೊಲೆ ಮಾಡಿ ಜೈಲು ಸೇರಿದ್ದಾರೆ. ಒಟ್ಟಿಗೆ ಅಪ್ಪ-ಮಗ ಕುಳಿತುಕೊಂಡು ಎಣ್ಣೆ ಹೀರುತ್ತಿದ್ದಾಗ ( ಮದ್ಯ ಸೇವನೆ) ಇಬ್ಬರ ನಡುವೆ ಎಣ್ಣೆ ಹಾಕುವ ವಿಚಾರಕ್ಕೆ ಜಗಳ ನಡೆದಿದೆ. ನಂತರ ಜಗಳ ತಾರಕಕ್ಕೇರಿದ್ದು, ರಮೇಶ್ ಮಚ್ಚಿನಿಂದ ಕೊಚ್ಚಿ ತಂದೆ ಪ್ರದೀಪ್ ನನ್ನ ಹತ್ಯೆ ಮಾಡಿದ್ದಾರೆ. ಎಣ್ಣೆ ನನಗೆ ಕಮ್ಮಿ, ನಿನಗೆ ಜಾಸ್ತಿ ಆಯಿತು ಎಂಬ ವಿಚಾರಕ್ಕೆ ಜಗಳ ನಡೆದಿದೆ ಎಂದು ಹೇಳಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇಷ್ಟಕ್ಕೆ ಕೊಲೆ ನಡೆಯಿತಾ..? ಅಥವಾ ಬೇರೆ ಏನಾದ್ರೂ ಕಾರಣ ಇದ್ಯಾ..? ಆದರೆ ಕ್ಷುಲ್ಲಕ ಕಾರಣಕ್ಕೆ ಮಗನನ್ನೇ ಕೊಚ್ಚಿ ಕೊಂದಿದ್ದು ಮಾತ್ರ ನಿಜಕ್ಕೂ ಭಯಾನಕ.! ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ತಂದೆ ರಮೇಶ್ ನನ್ನು ಜೈಲಿಗಟ್ಟಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular