HomeKarnatakaಜನಸಾಮಾನ್ಯರಿಗೆ ಮತ್ತೊಂದು ಶಾಕ್ : ಬರಗಾಲದ ಜೊತೆಗೆ `ಅಕ್ಕಿ’ ದರ ಏರಿಕೆ ಬರೆ!

ಜನಸಾಮಾನ್ಯರಿಗೆ ಮತ್ತೊಂದು ಶಾಕ್ : ಬರಗಾಲದ ಜೊತೆಗೆ `ಅಕ್ಕಿ’ ದರ ಏರಿಕೆ ಬರೆ!

ಬೆಂಗಳೂರು : ಬರಗಾಲದಿಂದ ತತ್ತರಿಸಿರುವ ರಾಜ್ಯದ ಜನತೆಗೆ ಮತ್ತೊಂದು ಶಾಕ್, ರಾಜ್ಯಾದ್ಯಂತ ಅಕ್ಕಿ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ.

ರಾಜ್ಯದಲ್ಲಿ ಅನಾವೃಷ್ಟಿ ಮತ್ತು ಮಧ್ಯವರ್ತಿಗಳು ಹೆಚ್ಚಿನ ಬೆಲೆಯ ನಿರೀಕ್ಷೆಯಿಂದ ಹೆಚ್ಚು ದಾಸ್ತಾನು ಮಾಡುತ್ತಿರುವ ಕಾರಣ ಗಗನಮುಖಿಯಾಗಿದೆ. ಇದರಿಂದಾಗಿ ಅಕ್ಕಿ ಬೆಲೆಯಲ್ಲಿ ಭಾರೀ ಏರಿಕೆಯಾಗಿದ್ದು, ಜನಸಾಮಾನ್ಯರು ತತ್ತರಿಸುವಂತಾಗಿದೆ.  ರಾಜ್ಯದಲ್ಲಿ ಕಳೆದ 15 ದಿನಗಳಲ್ಲಿ ಅಕ್ಕಿಗಳ ಬೆಲೆಯೂ ಪ್ರತಿ 26 ಕೆಜಿ ಚೀಲಕ್ಕೆ 80 ರೂ.ನಿಂದ 260 ರೂ.ವರೆಗೆ ಹೆಚ್ಚಳವಾಗಿದೆ. ಅಂದರೆ ಪ್ರತಿ ಕೆಜಿಗೆ 3 ರಿಂದ 10 ರೂ.ವರೆಗೆ ಹೆಚ್ಚಳವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಳೆ ಕೊರತೆಯಿಂದಾಗಿ ರಾಜ್ಯದಲ್ಲಿ ಈ ಬಾರಿಯ ಮುಂಗಾರಿನಲ್ಲಿ ಶೇ. 15-20 ಕ್ಕಿಂತ ಹೆಚ್ಚಿನ ಭತ್ತ ಹಾನಿಯಾಗಿದೆ.  ಹೀಗಾಗಿ ಮಾರುಕಟ್ಟೆಗೆ ಬೇಡಿಕೆಗೆ ತಕ್ಕಷ್ಟು ಅಕ್ಕಿ ಪೂರೈಕೆ ಆಗುತ್ತಿಲ್ಲ. ಪರಿಣಾಮ ಅಕ್ಕಿ ಬೆಲೆಯಲ್ಲಿ ಏರಿಕೆಯಾಗುತ್ತಿದೆ ಎನ್ನಲಾಗಿದೆ.

ಬಾಸ್ಮತಿ ಅಕ್ಕಿ ಕೆಜಿಗೆ 90 ರಿಂದ 120 ರೂ.ವರೆಗೆ ತಲುಪಿದರೆ, ಕೋಲಂ ಸ್ಟೀಮ್ 55 ರಿಂದ 65 ರೂ. ಸೋನಾ ಸ್ಟೀಮ್ 48-55 ರೂ. ಸೋನಾ ಮಧ್ಯಮ 42-55 ರೂ. ದೋಸೆ ಅಕ್ಕಿ 35-40 ರೂ. ಇಡ್ಲಿ ಅಕ್ಕಿ 35-40 ರೂ.ವರೆಗೆ ಏರಿಕೆಯಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular