HomeCrimeಮುಂಬೈನಲ್ಲಿ ಲಿವ್ ಇನ್ ಸಂಗಾತಿಯಿಂದ ಹತ್ಯೆಯಾದಾಕೆ ಕರ್ನಾಟಕ ಮೂಲದ ನರ್ಸ್...!

ಮುಂಬೈನಲ್ಲಿ ಲಿವ್ ಇನ್ ಸಂಗಾತಿಯಿಂದ ಹತ್ಯೆಯಾದಾಕೆ ಕರ್ನಾಟಕ ಮೂಲದ ನರ್ಸ್…!

ಮುಂಬೈನಲ್ಲಿ ತನ್ನ ಲಿವ್ ಇನ್ ಸಂಗಾತಿಯಿಂದಲೇ ಬರ್ಬರವಾಗಿ ಹತ್ಯೆಗೀಡಾಗಿ ಬೆಡ್ ಬಾಕ್ಸ್ ನಲ್ಲಿ ಪತ್ತೆಯಾದಾಕೆ ಕರ್ನಾಟಕ ಮೂಲದ ನರ್ಸ್ ಮೇಘಾ ತೊರವಿ ಎಂಬ ಸಂಗತಿ ಈಗ ಬಹಿರಂಗವಾಗಿದೆ.

ವೃತ್ತಿಯಲ್ಲಿ ನರ್ಸ್ ಆಗಿರುವ ಕರ್ನಾಟಕ ಮೂಲದ ಮೇಘಾ ತೊರವಿ (40) ನಿರುದ್ಯೋಗಿಯಾಗಿದ್ದ ಹಾರ್ದಿಕ್ ಜೊತೆ ಲಿವ್ ಇನ್ ಸಂಬಂಧದಲ್ಲಿ ಇದ್ದರು ಎಂದು ಹೇಳಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇವರಿಬ್ಬರೂ ಕೇವಲ 20 ದಿನಗಳ ಹಿಂದಷ್ಟೇ, ತಾವು ದಂಪತಿ ಎಂದು ಹೇಳಿಕೊಂಡು ನಾಲಾಸಪೋರಾದಲ್ಲಿ ಫ್ಲಾಟ್ ಬಾಡಿಗೆಗೆ ಪಡೆದಿದ್ದರು. ಇದೇ ಫ್ಲಾಟ್ ನ ಬೆಡ್ ಬಾಕ್ಸ್ ನಲ್ಲಿ ಮೇಘಾ ಶವ ಪತ್ತೆಯಾಗಿದೆ.

ಮೇಘಾಳನ್ನು ಕೊಲೆ ಮಾಡಿದ ಬಳಿಕ ಹಾರ್ದಿಕ್, ಆಕೆಯ ಚಿಕ್ಕಮ್ಮನಿಗೆ ಕರೆ ಮಾಡಿ ಈ ವಿಷಯ ತಿಳಿಸಿದ್ದು, ತಾನೂ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾನೆ.

ಮೇಘಾಳ ಚಿಕ್ಕಮ್ಮ ನೀಡಿದ ಮಾಹಿತಿ ಮೇರೆಗೆ ಫ್ಲ್ಯಾಟ್ ಬಾಗಿಲು ಒಡೆದು ನೋಡಿದಾಗ ಶವ ಪತ್ತೆಯಾಗಿದ್ದು, ಮಧ್ಯಪ್ರದೇಶದಲ್ಲಿದ್ದ ಹಾರ್ದಿಕ್ ನನ್ನು ಈಗ ಬಂಧಿಸಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular