HomeKarnatakaBREAKING : ‘ಚೈತ್ರಾ & ಗ್ಯಾಂಗ್’ ಮಾದರಿಯಲ್ಲೇ ಮತ್ತೊಂದು ಪ್ರಕರಣ ಬಯಲು : ಬಿಜೆಪಿ ಟಿಕೆಟ್...

BREAKING : ‘ಚೈತ್ರಾ & ಗ್ಯಾಂಗ್’ ಮಾದರಿಯಲ್ಲೇ ಮತ್ತೊಂದು ಪ್ರಕರಣ ಬಯಲು : ಬಿಜೆಪಿ ಟಿಕೆಟ್ ಕೊಡಿಸುವುದಾಗಿ 21 ಲಕ್ಷ ವಂಚನೆ

ಬೆಂಗಳೂರು : ಉದ್ಯಮಿಯೊಬ್ಬರಿಗೆ 5 ಕೋಟಿ ರೂ ಹಣ ವಂಚಿಸಿರುವ ‘ಚೈತ್ರಾ ಅಂಡ್ ಗ್ಯಾಂಗ್’ ಪ್ರಕರಣ ರಾಜ್ಯದಲ್ಲಿ ಭಾರಿ ಸುದ್ದಿಯಾಗಿದೆ.

ಇದರ ನಡುವೆ ‘ಚೈತ್ರಾ ಗ್ಯಾಂಗ್’ ಮಾದರಿಯಲ್ಲೇ ಮತ್ತೊಂದು ವಂಚನೆ ಪ್ರಕರಣ ನಡೆದಿರುವುದು ಬಯಲಾಗಿದೆ. ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಲಕ್ಷಾಂತರ ಹಣ ವಂಚನೆ ಎಸಗಿರುವ ಆರೋಪ ಕೇಳಿಬಂದಿದೆ.

ಏನಿದು ಘಟನೆ..? ಯಾರದ್ದು ಕೈವಾಡ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಯೆಸ್, ಕೊಪ್ಪಳದ ಕನಕಗಿರಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಜಿ ತಿಮ್ಮಾರೆಡ್ಡಿ ಅವರೇ ಹಣ ಕಳೆದುಕೊಂಡ ವ್ಯಕ್ತಿ. ಅವರ ಪತ್ನಿ ಗಾಯತ್ರಿ ತಿಮ್ಮಾರೆಡ್ಡಿ ಅವರಿಗೆ ಬಿಜೆಪಿ ಟಿಕೆಟ್ ಕೊಡಿಸಲು ಹೋಗಿ 21 ಲಕ್ಷ ಹಣ ಕಳೆದುಕೊಂಡಿದ್ದಾರೆ.

ದೆಹಲಿ ಮೂಲದ ವಿಶಾಲ್ ನಾಗ್ ಹಾಗೂ ಬೆಂಗಳೂರಿನ ಜೀತು ಹಾಗೂ ಗೌರವ್ ಎಂಬುವವರಿಗೆ 21 ಲಕ್ಷ ಹಣ ನೀಡಿ ತಿಮ್ಮಾರೆಡ್ಡಿ ಮೋಸದ ಜಾಲದಲ್ಲಿ ಸಿಲುಕಿದ್ದಾರೆ.ಹಣಕ್ಕಾಗಿ ಮಾಸ್ಟರ್ ಪ್ಲ್ಯಾನ್ ಮಾಡಿದ ಆರೋಪಿಗಳು ನಮಗೆ ಬಿಜೆಪಿ ಆ ನಾಯಕರು ಗೊತ್ತು, ಈ ನಾಯಕರು ಗೊತ್ತು. ನಿಮಗೆ ಖಂಡಿತ ಟಿಕೆಟ್ ಕೊಡಿಸುತ್ತೇವೆ ಎಂದು ನಂಬಿಸಿದ್ದಾರೆ. ಆರೋಪಿಗಳ ಮಾತು ನಂಬಿದ ತಿಮ್ಮಾರೆಡ್ಡಿ ಹಣ ಕೊಟ್ಟು ಮೋಸ ಹೋಗಿದ್ದಾರೆ.
ಈ ಕುರಿತು ಬೆಂಗಳೂರಿನ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಬಂಧನಕ್ಕೆ ಶೋಧ ಕಾರ್ಯ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular