ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಎಟಿಎಂ (ATM) ವ್ಯಾನ್ ದರೋಡೆಯಾಗಿದ್ದು, ಹಿಟಾಚಿ ಎಂಬ ಕಂಪನಿ ಸಿಬ್ಬಂದಿಗಳು ಸುಮಾರು 1.37 ಕೋಟಿ ಲೂಟಿ ಮಾಡಿದ್ದಾರೆ. ಹೌದು, ಇತ್ತೀಚೆಗೆ ರಾಜ್ಯದಲ್ಲಿ ಸಾಲು ಸಾಲು ಎಟಿಎಂ ದರೋಡೆ ಪ್ರಕರಣಗಳು ನಡೆಯುತ್ತಿದ್ದು, ಆತಂಕ ಮೂಡಿಸಿದೆ. ಆದರೆ ಎಟಿಎಂಗೆ ಹಣ ಹಾಕುವ ಕಂಪನಿ ಸಿಬ್ಬಂದಿಗಳೇ ಕೋಟಿ ಕೋಟಿ ಹಣ ಲೂಟಿ ಮಾಡಿದ್ದಾರೆ.
ಜ.19 ರಂದು ನಡೆದಿದ್ದ ಎಟಿಎಂ ವಾಹನ ದರೋಡೆ ತಡವಾಗಿ ಬೆಳಕಿಗೆ ಬಂದಿದೆ. ಎಟಿಎಂಗೆ ಹಣ ಹಾಕಲು ಅಧಿಕಾರಿಗಳು ಹೇಳುತ್ತಾರೆ. ಎಟಿಎಂಗಳಿಗೆ ಹಣ ಡೆಪಾಸಿಟ್ ಮಾಡಲು ಕಂಪನಿ ಅಧಿಕಾರಿಗಳು ಸಿಬ್ಬಂದಿಗಳಿಗೆ ಸೂಚನೆ ನೀಡುತ್ತಾರೆ. ಅಂತೆಯೇ ಕೋರಮಂಗಲದ ಆ್ಯಕ್ಸಿಸ್ ಬ್ಯಾಂಕ್ ನಿಂದ ಸಿಬ್ಬಂದಿಗಳು ಹಣ ಕೊಂಡೊಯ್ದಿದ್ದಾರೆ. ಆದರೆ ಸಿಬ್ಬಂದಿಗಳು ಎಟಿಎಂಗೆ ಹಣ ಹಾಕದೇ ಸುಮಾರು ವ್ಯಾನ್ ಸಮೇತ 1.37 ಕೋಟಿ ಲೂಟಿ ಮಾಡಿದ್ದಾರೆ.ಪ್ರವೀಣ್. ಧನಶೇಖರ್, ರಾಮಕ್ಕ, ಹರೀಶ್ ಕುಮಾರ್ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.ಕೋರಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿರುವುದು ವರದಿಯಾಗಿದೆ.
ಘಟನೆ ನಡೆದ ಕೂಡಲೇ ಬೆರಳಚ್ಚು ತಜ್ಞರು ಮತ್ತು ಶ್ವಾನದಳದೊಂದಿಗೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಹತ್ತಿರದ ಅಂಗಡಿ ಮುಂಗಟ್ಟುಗಳ ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ .ಹಿಟಾಚಿ ಪೇಮೆಂಟ್ ಸರ್ವಿಸಸ್ (Hitachi Payment Services) ಭಾರತದಲ್ಲಿ ಅತಿ ಹೆಚ್ಚು ಎಟಿಎಂಗಳನ್ನು ನಿರ್ವಹಿಸುವ ಪ್ರಮುಖ ಕಂಪನಿಗಳಲ್ಲಿ ಒಂದಾಗಿದೆ.
ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ಕ್ರಮಗಳು
* ಒಂಟಿ ಎಟಿಎಂ ಬಳಕೆ ಬೇಡ: ರಾತ್ರಿ ವೇಳೆ ಸೆಕ್ಯೂರಿಟಿ ಇಲ್ಲದ ಅಥವಾ ಕತ್ತಲೆಯಲ್ಲಿರುವ ಎಟಿಎಂಗಳನ್ನು ಬಳಸುವುದನ್ನು ತಪ್ಪಿಸಿ.
* ಅನುಮಾನಾಸ್ಪದ ಚಟುವಟಿಕೆ: ಎಟಿಎಂ ಸಮೀಪ ಯಾರಾದರೂ ಅನುಮಾನಾಸ್ಪದವಾಗಿ ಓಡಾಡುತ್ತಿದ್ದರೆ ತಕ್ಷಣ 112 ಗೆ ಕರೆ ಮಾಡಿ ಪೊಲೀಸರಿಗೆ ತಿಳಿಸಿ.

