ನವದೆಹಲಿ: ಅನಿಲ್ ಅಂಬಾನಿ ರಿಲಯನ್ಸ್ ಗ್ರೂಪ್ ಕಂಪನಿಗಳ ವಿರುದ್ಧ ಹಣ ಅಕ್ರಮ ವರ್ಗಾವಣೆ ತನಿಖೆ ಮುಂದುವರೆಸಿರುವ ಜಾರಿ ನಿರ್ದೇಶನಾಲಯ(ಇಡಿ) 3034 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಜಪ್ತಿ ಮಾಡಿದೆ. ಜಪ್ತಿ ಮಾಡಲಾದ ಆಸ್ತಿಗಳು ರಿಲಯನ್ಸ್ ಕಮ್ಯುನಿಕೇಷನ್ ಮತ್ತು ಆರ್. ಇನ್ ಫ್ರಾಸ್ಟ್ರಕ್ಚರ್ ಲಿಮಿಟೆಡ್ ಗೆ ಸೇರಿವೆ.
ಜಪ್ತಿಯಾದ ಆಸ್ತಿಯಲ್ಲಿ ಮುಂಬೈನ ಒಂದು ಫ್ಲ್ಯಾಟ್, ಮಹಾರಾಷ್ಟ್ರದ ಖಂಡಾಲಾ ಗಿರಿಧಾಮದಲ್ಲಿರುವ ಫಾರ್ಮ್ ಹೌಸ್, ಅಹಮದಾಬಾದ್ ಸಾನಂದದಲ್ಲಿರುವ ಜಮೀನು ಮತ್ತು ಆರ್ ಇನ್ಫಾದಲ್ಲಿರುವ 7.71 ಕೋಟಿ ರೂ. ಮೌಲ್ಯದ ಷೇರುಗಳು ಸೇರಿವೆ.
ಅನಿಲ್ ಅಂಬಾನಿ ರಿಲಯನ್ಸ್ ಗ್ರೂಪ್ ವಿರುದ್ಧದ ಪ್ರಕರಣದಲ್ಲಿ ಜಪ್ತಿ ಮಾಡಲಾದ ಒಟ್ಟು ಆಸ್ತಿಯ ಮೌಲ್ಯ 19,344 ಕೋಟಿ ರೂ.ಗೆ ತಲುಪಿದೆ. ಬ್ಯಾಂಕ್ ವಂಚನೆ ಮತ್ತು ಹಣ ದುರುಪಯೋಗ ಆರೋಪದ ಮೇಲೆ ಅನಿಲ್ ಅಂಬಾನಿ ಒಡೆತನದ ಕಂಪನಿಗಳ ವಿರುದ್ಧ ಇಡಿ ತನಿಖೆ ನಡೆಸುತ್ತಿದೆ.

