HomeKarnatakaSHOCKING: ಮಗುವಿಗೆ ಸುಟ್ಟು ಗಾಯಗೊಳಿಸಿದ ಅಂಗನವಾಡಿ ಸಹಾಯಕಿ ವಿಕೃತಿ

SHOCKING: ಮಗುವಿಗೆ ಸುಟ್ಟು ಗಾಯಗೊಳಿಸಿದ ಅಂಗನವಾಡಿ ಸಹಾಯಕಿ ವಿಕೃತಿ

ಕೋಲಾರ: ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ನಿಡಘಟ್ಟದ ಅಂಗನವಾಡಿ ಕೇಂದ್ರದಲ್ಲಿ ಸಹಾಯಕಿಯೊಬ್ಬರು ಮಗುವಿಗೆ ಬೆಂಕಿಯಿಂದ ಸುಟ್ಟು ಗಾಯಗೊಳಿಸಿದ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಅಂಗನವಾಡಿ ಸಹಾಯಕಿ ಶ್ರೀದೇವಿ ಕೃತ್ಯವೆಸಗಿದವರು. ಗ್ರಾಮದ ಮುನಿರಾಜು ಅವರ 4 ವರ್ಷದ ಪುತ್ರಿಯ ಎದೆ ಭಾಗದಲ್ಲಿ ಸುಟ್ಟಿದ್ದಾರೆ. ಈ ಹಿಂದೆಯೂ ಮಗುವಿನ ಕಾಲಿನ ಮೇಲೆ ಸುಟ್ಟು ಗಾಯಗೊಳಿಸಿದ್ದರು. ಆಗ ಗ್ರಾಮಸ್ಥರು ಬುದ್ಧಿವಾದ ಹೇಳಿದ್ದು, ಈಗ ಮತ್ತೊಮ್ಮೆ ನಮ್ಮ ಮಗುವನ್ನೇ ಗುರಿಯಾಗಿಸಿಕೊಂಡು ಅಂಗನವಾಡಿ ಸಹಾಯಕಿ ಶ್ರೀದೇವಿ ಇಂತಹ ಕೃತ್ಯವೆಸಗಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.

ನಿಡಘಟ್ಟ ಕೇಂದ್ರದ ಬಾಲ ವಿಕಾಸ ಸಮಿತಿ ಸದಸ್ಯರು, ಜಿಲ್ಲಾ ನಿರೂಪಣಾಧಿಕಾರಿಗಳು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಮೇಲ್ವಿಚಾರಕರು, ಮತ್ತು ಅಂಗನವಾಡಿ ಕೇಂದ್ರದ ಫಲಾನುಭವಿಗಳು, ಮಗುವಿನ ಪೋಷಕರು ಒಳಗೊಂಡಂತೆ ಶನಿವಾರ ಸಭೆ ನಡೆಸಲಾಗಿದೆ. ಮಾಲೂರು ತಾಲೂಕಿನ ತುರುಗಳೂರು ಅಂಗನವಾಡಿ ಕೇಂದ್ರಕ್ಕೆ ಸಹಾಯಕಿ ಶ್ರೀದೇವಿ ಅವರನ್ನು ವರ್ಗಾಯಿಸಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular