HomeIndiaSHOCKING NEWS: ಪ್ಲಾಟ್ ಫಾರಂನಲ್ಲಿ ಕುಳಿತಿದ್ದವರ ಮೇಲೆ ಬಸ್ ಹತ್ತಿಸಿದ ಚಾಲಕ; ಮೂವರು ದುರ್ಮರಣ

SHOCKING NEWS: ಪ್ಲಾಟ್ ಫಾರಂನಲ್ಲಿ ಕುಳಿತಿದ್ದವರ ಮೇಲೆ ಬಸ್ ಹತ್ತಿಸಿದ ಚಾಲಕ; ಮೂವರು ದುರ್ಮರಣ

ಹೈದರಾಬಾದ್: ಬಸ್ ಚಾಲಕನೊಬ್ಬನ ಎಡವಟ್ಟಿನಿಂದಾಗಿ ಮೂವರು ಸಾವನ್ನಪ್ಪಿರುವ ಘಟನೆ ನಡೆದಿದೆ. ಪ್ಲಾಟ್ ಫಾರಂ ಮೇಲೆಯೇ ಚಾಲಕ ಬಸ್ ಹತ್ತಿಸಿದ್ದು, ಬಸ್ ಗಾಗಿ ಕಾಯುತ್ತಾ ಕುಳಿತಿದ್ದವರ ಮೇಲೆಯೇ ಬಸ್ ಹರಿದು ಮೂವರು ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ.

ಆಂದ್ರಪ್ರದೇಶದ ವಿಜಯವಾಡ ಬಸ್ ನಿಲ್ದಾಣದಲ್ಲಿ ಸಾರಿಗೆ ಬಸ್ ಚಾಲಕ ರಿವರ್ಸ್ ಗೇರ್ ಹಾಕುವ ಬದಲು ಪ್ಲಾಟ್ ಫಾರಂ ಮೇಲೆಯೇ ಬಸ್ ಹತ್ತಿಸಿದ್ದಾನೆ. ಪರಿಣಾಮ ಮಹಿಳೆ ಸೇರಿದಂತೆ ಮೂವರ ಮೇಲೆ ಬಸ್ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹಲವರು ಗಾಯಗೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಸ್ ನಿಲ್ದಾಣದ ಸಿಸಿಟಿವಿಯಲ್ಲಿ ಈ ಭೀಕರ ದೃಶ್ಯ ಸೆರೆಯಾಗಿದೆ. ವಿಜಯವಾಡದ ಪಂಡಿತ್ ನೆಹರು ಬಸ್ ನಿಲ್ದಾಣದ ಪ್ಲಾಟ್ ಫಾರಂ 12ರಲ್ಲಿ ಈ ಘಟನೆ ನಡೆದಿದೆ. ಎಪಿಎಸ್ ಆರ್ ಟಿ ಸಿ ಎಸಿ ಮೆಟ್ರೋ ಲಕ್ಸುರಿ ಬಸ್ ವೇಗವಾಗಿ ಬಸ್ ನಿಲ್ದಾಣಕ್ಕೆ ಬಂದಿದ್ದು, ಬಸ್ ಚಾಲಕನ ನಿಯಂತ್ರಣ ತಪ್ಪಿದ ಬಸ್ ಏಕಾಏಕಿ ಪ್ಲಾಟ್ ಫಾರಂ ಮೇಲೆ ನುಗ್ಗಿದೆ. ಚಾಲಕನ ನಿರ್ಲಕ್ಷ್ಯದಿಂದಲೇ ಘಟನೆ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಈ ಘಟನೆ ಕುರಿತು ಅಧಿಕಾರಿಗಳು ಉತ್ತನ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular