HomeLatest News'ಭಾರತಕ್ಕೆ ವಿಶ್ವಕಪ್ ಗೆದ್ದುಕೊಡುವುದೇ ನನ್ನ ಗುರಿ': ಹಾರ್ಮೋನ್ ಥೆರಪಿ ಮತ್ತು ಸವಾಲುಗಳ ಬಗ್ಗೆ ಆನಾಯಾ ಮುಕ್ತ...

‘ಭಾರತಕ್ಕೆ ವಿಶ್ವಕಪ್ ಗೆದ್ದುಕೊಡುವುದೇ ನನ್ನ ಗುರಿ’: ಹಾರ್ಮೋನ್ ಥೆರಪಿ ಮತ್ತು ಸವಾಲುಗಳ ಬಗ್ಗೆ ಆನಾಯಾ ಮುಕ್ತ ಮಾತು!

ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಸಂಜಯ್ ಬಾಂಗರ್ ಅವರ ಪುತ್ರಿ ಆನಾಯಾ ಬಾಂಗರ್, 2027ರ ಮಾರ್ಚ್‌ನಿಂದ ಆಸ್ಟ್ರೇಲಿಯಾದ ಗಣ್ಯ ಮಹಿಳಾ ಕ್ರಿಕೆಟ್‌ನಲ್ಲಿ ಸ್ಪರ್ಧಿಸಲು ಅರ್ಹತೆ ಪಡೆಯಲಿದ್ದಾರೆ. 2024ರಲ್ಲಿ ಹಾರ್ಮೋನ್ ರಿಪ್ಲೇಸ್‌ಮೆಂಟ್ ಥೆರಪಿ (ಹೆಚ್‌ಆರ್‌ಟಿ) ಪ್ರಕ್ರಿಯೆಗೆ ಒಳಗಾಗಿದ್ದ 23 ವರ್ಷದ ಆನಾಯಾ, ಕ್ರಿಕೆಟ್ ಆಸ್ಟ್ರೇಲಿಯಾದ ಲಿಂಗ ಪರಿವರ್ತಿತ ಆಟಗಾರರ ನೀತಿಯಡಿಯಲ್ಲಿ ಅನುಮತಿ ಪಡೆದಿದ್ದಾರೆ. ಎನ್‌ಡಿಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಆನಾಯಾ ತಮ್ಮ ಲಿಂಗ ಪರಿವರ್ತನೆಯ ಸವಾಲುಗಳು, ದೈಹಿಕ ಬದಲಾವಣೆಗಳು ಹಾಗೂ ಭಾರತ ತಂಡವನ್ನು ಪ್ರತಿನಿಧಿಸಿ ವಿಶ್ವಕಪ್ ಗೆಲ್ಲುವ ತಮ್ಮ ಕನಸಿನ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

ಲಿಂಗ ಪರಿವರ್ತನೆಯ ಪ್ರಕ್ರಿಯೆಯು ದೈಹಿಕ ಸಾಮರ್ಥ್ಯದ ಮೇಲೆ ಬೀರುವ ಪ್ರಭಾವದ ಬಗ್ಗೆ ವಿವರಿಸಿದ ಆನಾಯಾ, ಟೆಸ್ಟೋಸ್ಟೆರಾನ್ ಹಾರ್ಮೋನ್ ತಡೆಯುವ ಮಾತ್ರೆಗಳು ಮತ್ತು ಈಸ್ಟ್ರೋಜೆನ್ ಸೇವನೆಯಿಂದ ದೇಹದ ಸ್ನಾಯುವಿನ ಸಾಂದ್ರತೆ ಹಾಗೂ ಶಕ್ತಿ ಕಡಿಮೆಯಾಗುತ್ತದೆ ಎಂದಿದ್ದಾರೆ. ಸದ್ಯ ತಮ್ಮ ಶರೀರದಲ್ಲಿ ಟೆಸ್ಟೋಸ್ಟೆರಾನ್ ಮಟ್ಟ 0.6 nmol/L ನಷ್ಟಿದ್ದು, ಇದು ಸಾಮಾನ್ಯ ಮಹಿಳೆಯರಿಗಿಂತಲೂ ಕಡಿಮೆಯಿದೆ. ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯ ನಡೆಸಿದ ವೈಜ್ಞಾನಿಕ ಪರೀಕ್ಷೆಗಳಲ್ಲೂ ತಮ್ಮ ಶ್ವಾಸಕೋಶದ ಸಾಮರ್ಥ್ಯ ಹಾಗೂ ದೈಹಿಕ ಕಾರ್ಯಕ್ಷಮತೆ ಸಾಮಾನ್ಯ ಮಹಿಳಾ ಅಥ್ಲೀಟ್‌ಗಳಿಗೆ ಸಮಾನವಾಗಿದೆ ಎಂಬುದು ಸಾಬೀತಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಆಸ್ಟ್ರೇಲಿಯಾದ ಕ್ಲಬ್ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ವುಮೆನ್ಸ್ ಬಿಗ್ ಬ್ಯಾಷ್ ಲೀಗ್ (WBBL) ಪ್ರವೇಶಿಸುವುದು ಹಾಗೂ ಭಾರತದಲ್ಲಿ ಬಿಸಿಸಿಐ ಕೂಡ ಇಂತಹ ಆಟಗಾರರಿಗಾಗಿ ಸ್ಪಷ್ಟ ನಿಯಮಾವಳಿಗಳನ್ನು ರೂಪಿಸಬೇಕು ಎಂಬುದು ಆನಾಯಾ ಅವರ ಆಶಯವಾಗಿದೆ. ವಿರಾಟ್ ಕೊಹ್ಲಿ, ಅಭಿಷೇಕ್ ಶರ್ಮಾ ಹಾಗೂ ಸ್ಮೃತಿ ಮಂಧನಾ ಅವರ ಆಟವನ್ನು ಇಷ್ಟಪಡುವ ಇವರು, ಭಾರತಕ್ಕೆ ಮಹಿಳಾ ವಿಶ್ವಕಪ್ ಹಾಗೂ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದುಕೊಡುವ ಮಹದಾಸೆ ವ್ಯಕ್ತಪಡಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular