ಬಾಲಿವುಡ್ ನಟಿ ಅನನ್ಯಾ ಪಾಂಡೆ ಇತ್ತೀಚೆಗೆ ಮೊನಾಕೊದಲ್ಲಿ ನಡೆದ ಐಷಾರಾಮಿ ವಾಚ್ ಬ್ರ್ಯಾಂಡ್ ಕಾರ್ಯಕ್ರಮವೊಂದರಲ್ಲಿ ತಮ್ಮ ವಿಶಿಷ್ಟ ಫ್ಯಾಷನ್ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಸಮುದ್ರ ತೀರದ ಸುಂದರ ಹಿನ್ನೆಲೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಅನನ್ಯಾ, ಭಾರತದ ಖ್ಯಾತ ಫ್ಯಾಷನ್ ಡಿಸೈನರ್ ಗೌರವ್ ಗುಪ್ತಾ ಅವರ ಸ್ಪ್ರಿಂಗ್ ೨೦೨೬ ಕಲೆಕ್ಷನ್‌ನ ವಿಶೇಷ ಚಿನ್ನದ ಬಣ್ಣದ ಗೌನ್ ಧರಿಸಿ ಕಂಗೊಳಿಸಿದ್ದಾರೆ.
ವಿಶೇಷ ವಿನ್ಯಾಸದ ಕಲ್ಚರ್ ಗೌನ್
ಅನನ್ಯಾ ಧರಿಸಿದ್ದ ಈ ಕಂಚು ಮತ್ತು ಚಿನ್ನದ ಮಿಶ್ರಿತ ಬಣ್ಣದ ಗೌನ್ ಕಣ್ಣು ಕೋರೈಸುವಂತಿತ್ತು. ಆಧುನಿಕ ಶೈಲಿಯ ಈ ಉಡುಪು ನಟಿಯ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿತ್ತು. ಭುಜದ ಮೇಲಿಂದ ಹರಿದುಬಂದ ಲೋಹದ ಚೈನ್ ವಿನ್ಯಾಸವು ಈ ಗೌನ್‌ಗೆ ಭವಿಷ್ಯದ ಶೈಲಿಯ ಲುಕ್ ನೀಡಿತ್ತು. ತೊಡೆಯ ಭಾಗದಲ್ಲಿ ಕಟ್ ಹೊಂದಿದ್ದ ಈ ಸುಂದರ ಉಡುಪಿನಲ್ಲಿ ಅನನ್ಯಾ ಜಾಗತಿಕ ವೇದಿಕೆಯ ಮೇಲೆ ಅತ್ಯಂತ ಆತ್ಮವಿಶ್ವಾಸದಿಂದ ಕ್ಯಾಮೆರಾಗಳಿಗೆ ಪೋಸ್ ನೀಡಿದ್ದಾರೆ.
ಗಮನ ಸೆಳೆದ ಒಂದು ಲಕ್ಷದ ಹೀಲ್ಸ್ ಮತ್ತು ರೇರ್ ವಾಚ್
ಈ ವಿಶೇಷ ಉಡುಪಿಗೆ ತಕ್ಕಂತೆ ಅನನ್ಯಾ ತಮ್ಮ ಕೇಶವಿನ್ಯಾಸವನ್ನು ಸರಳವಾಗಿ ಇಟ್ಟುಕೊಂಡಿದ್ದರು. ಕೂದಲನ್ನು ಮಧ್ಯದಲ್ಲಿ ಭಾಗ ಮಾಡಿ ಸ್ಲೀಕ್ ಬನ್ ಶೈಲಿಯಲ್ಲಿ ಕಟ್ಟಲಾಗಿತ್ತು. ಮುಖಕ್ಕೆ ಒಪ್ಪುವಂತಹ ನ್ಯೂಡ್ ಮೇಕ್ಅಪ್ ಅವರ ಅಂದವನ್ನು ಮತ್ತಷ್ಟು ಹೆಚ್ಚಿಸಿತ್ತು. ಈ ಕಾರ್ಯಕ್ರಮದ ಭಾಗವಾಗಿ ಅವರು ಕೈಗೆ ಧರಿಸಿದ್ದ ಪಿಯಾಗೆಟ್ ಬ್ರ್ಯಾಂಡ್‌ನ ದುಬಾರಿ ವಾಚ್ ಎಲ್ಲರ ಗಮನ ಸೆಳೆಯುವಂತಿತ್ತು. ಇದರೊಂದಿಗೆ ಅವರು ಧರಿಸಿದ್ದ ಕ್ರಿಸ್ಟಲ್ ಸ್ಟಡ್ ಹೊಂದಿರುವ ಕ್ರಿಶ್ಚಿಯನ್ ಲುಬುಟಿನ್ ಬ್ರ್ಯಾಂಡ್‌ನ ಹೀಲ್ಸ್ ಮೌಲ್ಯ ಸುಮಾರು ೧,೦೫,೦೫೬ ರೂಪಾಯಿ ಎಂದು ತಿಳಿದುಬಂದಿದೆ. ಜಾಗತಿಕ ಮಟ್ಟದಲ್ಲಿ ಭಾರತೀಯ ಫ್ಯಾಷನ್ ಉಡುಪನ್ನು ಧರಿಸಿ ಅನನ್ಯಾ ಪಾಂಡೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದ್ದಾರೆ.

