ಪ್ಯಾರಿಸ್ ಫ್ಯಾಷನ್ ವೀಕ್‌ನಲ್ಲಿ ಯಶಸ್ವಿ ಪ್ರದರ್ಶನ ನೀಡಿದ ನಂತರ ಖ್ಯಾತ ಫ್ಯಾಷನ್ ಡಿಸೈನರ್ ಗೌರವ್ ಗುಪ್ತಾ ಮುಂಬೈನಲ್ಲಿ ತಮ್ಮ ಹೊಸ ಕೌಟೂರ್ ಕಲೆಕ್ಷನ್ ‘ಲೈಟ್ ಸಾಂಗ್’ ಅನ್ನು ಅನಾವರಣಗೊಳಿಸಿದ್ದಾರೆ. ಮುಂಬೈನ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ನಡೆದ ಈ ಅದ್ಧೂರಿ ಫ್ಯಾಷನ್ ಶೋನಲ್ಲಿ ಬಾಲಿವುಡ್ ನಟಿ ಅನನ್ಯಾ ಪಾಂಡೆ ಆಧುನಿಕ ವಧುವಿನ ಉಡುಪಿನಲ್ಲಿ ರ್ಯಾಂಪ್ ಮೇಲೆ ನಡೆದು ಎಲ್ಲರ ಗಮನ ಸೆಳೆದಿದ್ದಾರೆ.
ಗೌರವ್ ಗುಪ್ತಾ ಅವರ ಈ ವಿಶೇಷ ಶೋನ ಶೋಸ್ಟಾಪರ್ ಆಗಿ ಎಂಟ್ರಿ ಕೊಟ್ಟ ಅನನ್ಯಾ ಪಾಂಡೆ, ಆಕರ್ಷಕ ಐವರಿ (ಬಿಳಿ) ಬಣ್ಣದ ಲೆಹೆಂಗಾದಲ್ಲಿ ಕಂಗೊಳಿಸಿದರು. ಈ ಉಡುಪನ್ನು ನೂರಾರು ಹರಳುಗಳು, ಮಣಿಗಳು ಮತ್ತು ಸೀಕ್ವಿನ್ಸ್ ಬಳಸಿ ಕೈಯಿಂದಲೇ ಅತ್ಯಂತ ಕಲಾತ್ಮಕವಾಗಿ ವಿನ್ಯಾಸಗೊಳಿಸಲಾಗಿತ್ತು. ಕ್ರಾಪ್ಡ್ ಬ್ಲೌಸ್ ಹಾಗೂ ಉದ್ದನೆಯ ಟ್ರೇನ್ ಹೊಂದಿದ್ದ ಈ ವಿಶಿಷ್ಟ ಲಹೆಂಗಾಕ್ಕೆ ಪೂರಕವಾಗಿ ತಲೆಗೆ ನೆಟ್ ವೇಲ್ (ಮುಸುಕು) ಧರಿಸಿದ್ದು ಅವರ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿತ್ತು.
ಈ ಮಾಡರ್ನ್ ಬ್ರೈಡ್ ಲುಕ್‌ನಲ್ಲಿ ಎಲ್ಲರ ಕಣ್ಣು ನೆಟ್ಟಿದ್ದು ಅನನ್ಯಾ ಧರಿಸಿದ್ದ ವಜ್ರದ ಮೂಗುತಿ (ಸೆಪ್ಟಮ್ ರಿಂಗ್) ಮೇಲೆ. ಸಾಮಾನ್ಯವಾಗಿ ವಧುಗಳು ಸಾಂಪ್ರದಾಯಿಕ ಒಡವೆಗಳನ್ನು ಧರಿಸುವುದು ವಾಡಿಕೆ, ಆದರೆ ಅನನ್ಯಾ ವಜ್ರದ ಮೂಗುತಿ ಹಾಗೂ ಮಾಂಗ್ ಟಿಕ್ಕಾ ಧರಿಸಿ ಫ್ಯಾಷನ್ ಲೋಕದಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದ್ದಾರೆ. ಈ ಉಡುಪಿನ ವಿನ್ಯಾಸಕ್ಕಾಗಿ ಸುಮಾರು 150 ಕ್ಕೂ ಹೆಚ್ಚು ಕುಶಲಕರ್ಮಿಗಳು 4,000 ಕ್ಕೂ ಹೆಚ್ಚು ಗಂಟೆಗಳ ಕಾಲ ಶ್ರಮಿಸಿದ್ದಾರೆ ಎಂದು ತಿಳಿದುಬಂದಿದೆ.
ಅನನ್ಯಾ ಪಾಂಡೆ ಅವರ ಸಿನಿಮಾಗಳ ವಿಷಯಕ್ಕೆ ಬಂದರೆ, ಅವರು ಇತ್ತೀಚೆಗೆ ಲಕ್ಷ್ ನಟನೆಯ ‘ಚಂದ್ ಮೇರಾ ದಿಲ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಅವರ ಜನಪ್ರಿಯ ವೆಬ್ ಸರಣಿ ‘ಕಾಲ್ ಮೀ ಬೇ’ ಸೀಸನ್ 2 ಚಿತ್ರೀಕರಣದಲ್ಲಿ ನಟಿ ಬ್ಯುಸಿಯಾಗಿದ್ದಾರೆ.
Who was the man Ananya Panday walked the runway with?
He placed his hand on her waist and rubbed it with his fingers.
The shocking part is that Ananya did not stop him.
This is a troubling example of how some Bollywood celebrities tolerate inappropriate behavior. pic.twitter.com/DHBwyqikA4
— Chota Don (@choga_don) July 18, 2026

