HomeInternationalಲಂಡನ್ ರಸ್ತೆಗಿಳಿದ ಭಾರತದ ಆಟೋ ರಿಕ್ಷಾ ;  ಆನಂದ್ ಮಹೀಂದ್ರಾ ಟ್ವೀಟ್  ವೈರಲ್ | Watch

ಲಂಡನ್ ರಸ್ತೆಗಿಳಿದ ಭಾರತದ ಆಟೋ ರಿಕ್ಷಾ ;  ಆನಂದ್ ಮಹೀಂದ್ರಾ ಟ್ವೀಟ್  ವೈರಲ್ | Watch

ಭಾರತದ ಪ್ರತಿಯೊಂದು ನಗರ ಹಾಗೂ ಹಳ್ಳಿಗಳ ರಸ್ತೆಗಳಲ್ಲಿ ದಿನನಿತ್ಯ ಕಾಣಸಿಗುವ ಸಾಮಾನ್ಯ ಮೂರು ಚಕ್ರದ ಆಟೋ ರಿಕ್ಷಾ ಈಗ ಬ್ರಿಟನ್ ರಾಜಧಾನಿ ಲಂಡನ್ ರಸ್ತೆಯಲ್ಲಿ ಪ್ರತ್ಯಕ್ಷವಾಗಿ ಎಲ್ಲರ ಗಮನ ಸೆಳೆಯುತ್ತಿದೆ. ಭಾರತೀಯರಿಗೆ ತೀರ ಸಾಮಾನ್ಯ ಎನಿಸುವ ಈ ದೃಶ್ಯ ಲಂಡನ್‌ನ ರಸ್ತೆಗಳಲ್ಲಿ ಕಾಣಿಸಿಕೊಂಡಾಗ ಅಲ್ಲಿನ ಸಾರ್ವಜನಿಕರು ಹಾಗೂ ಸಾಮಾಜಿಕ ಜಾಲತಾಣದ ಬಳಕೆದಾರರಲ್ಲಿ ತೀವ್ರ ಕೌತುಕ ಮೂಡಿಸಿದೆ.

ಮಹೀಂದ್ರಾ ಸಂಸ್ಥೆಯ ಮುಖ್ಯಸ್ಥ ಆನಂದ್ ಮಹೀಂದ್ರಾ ಅವರು ಲಂಡನ್ ರಸ್ತೆಯಲ್ಲಿ ಸಂಚರಿಸುತ್ತಿರುವ ಮಹೀಂದ್ರಾ ಬ್ರಾಂಡ್‌ನ ಆಟೋ ರಿಕ್ಷಾದ ವೀಡಿಯೊವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಗುಜರಾತಿ ಭಾಷೆಯಲ್ಲಿ ಶೀರ್ಷಿಕೆ ಬರೆದುಕೊಂಡಿರುವ ಅವರು, ಆಟೋ ಪ್ರಿಯರೊಬ್ಬರು ಭಾರತದ ಈ ಮೂರು ಚಕ್ರದ ವಾಹನವನ್ನು ಬ್ರಿಟನ್‌ಗೆ ತೆಗೆದುಕೊಂಡು ಹೋಗಿದ್ದಾರೆ ಎಂದು ತಿಳಿಸಿದ್ದಾರೆ. ಲಂಡನ್‌ನ ವಿಶಿಷ್ಟ ಕಟ್ಟಡಗಳು ಮತ್ತು ಕಾರುಗಳ ನಡುವೆ ಭಾರತೀಯ ಶೈಲಿಯ ಆಟೋ ಸಾಗುತ್ತಿರುವ ದೃಶ್ಯ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೆಯಾಗುತ್ತಿದ್ದು, ನೆಟ್ಟಿಗರು ವಿವಿಧ ರೀತಿಯ ಆಸಕ್ತಿಕರ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಬ್ರಿಟಿಷರು ಭಾರತವನ್ನು ಆಳಿದ ಇತಿಹಾಸವನ್ನು ನೆನಪಿಸಿಕೊಳ್ಳುತ್ತಾ ಕೆಲವರು ಇದನ್ನು ರಿವರ್ಸ್ ಕೊಲೊನೈಸೇಶನ್ ಎಂದು ಹಾಸ್ಯ ಮಾಡಿದ್ದಾರೆ. ಇನ್ನು ಕೆಲವರು ಲಂಡನ್‌ನಲ್ಲಿ ಭಾರತೀಯ ಶೈಲಿಯ ಮೀಟರ್ ಚೌಕಾಶಿ, ಆಟೋ ಚಾಲಕರ ಮಾತುಕತೆ ಹೇಗಿರಬಹುದು ಎಂದು ತಮಾಷೆಯಾಗಿ ಬರೆದುಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಭಾರತೀಯ ಸಾರಿಗೆ ವ್ಯವಸ್ಥೆಯ ಪ್ರಮುಖ ಅಂಗವಾಗಿರುವ ಆಟೋ ರಿಕ್ಷಾಗಳು ವಿದೇಶಿ ನೆಲದಲ್ಲಿ ಅದರಲ್ಲೂ ಲಂಡನ್‌ನಂತಹ ಮಹಾನಗರದಲ್ಲಿ ಕಾಣಿಸಿಕೊಂಡಿರುವುದು ಮಹೀಂದ್ರಾ ಸಂಸ್ಥೆಯ ಜಾಗತಿಕ ಗುರುತಿಗೆ ಮತ್ತಷ್ಟು ಮೆರುಗು ನೀಡಿದೆ. ಇದಕ್ಕೂ ಮುನ್ನ ಕೂಡ ಬ್ರಿಟನ್ ರಸ್ತೆಗಳಲ್ಲಿ ಭಾರತದ ಆಟೋಗಳು ಕಾಣಿಸಿಕೊಂಡಿದ್ದ ಫೋಟೋಗಳನ್ನು ಹಲವು ಬಳಕೆದಾರರು ಹಂಚಿಕೊಂಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular