HomeKarnatakaಪ್ರಮುಖ ಯಾತ್ರಾ ಸ್ಥಳ ʼನಂಜನಗೂಡು ನಂಜುಂಡೇಶ್ವರʼ ದೇವಾಲಯ

ಪ್ರಮುಖ ಯಾತ್ರಾ ಸ್ಥಳ ʼನಂಜನಗೂಡು ನಂಜುಂಡೇಶ್ವರʼ ದೇವಾಲಯ

ನಂಜನಗೂಡು ಎಂದ ಕೂಡಲೇ ಕೆಲವರಿಗೆ ಹಲ್ಲಿನ ಪುಡಿ ನೆನಪಾಗುತ್ತದೆ. ಮೈಸೂರಿನಿಂದ ಸುಮಾರು 25 ಕಿಲೋ ಮೀಟರ್ ದೂರದಲ್ಲಿರುವ ನಂಜನಗೂಡು ಪ್ರಮುಖ ಯಾತ್ರಾ ಸ್ಥಳ. ಹೆಚ್ಚಿನ ಸಂಖ್ಯೆಯ ಪ್ರವಾಸಿಗರು, ಯಾತ್ರಾರ್ಥಿಗಳು ಇಲ್ಲಿಗೆ ಭೇಟಿ ಕೊಡುತ್ತಾರೆ. ಕಪಿಲಾ ನದಿಯ ದಂಡೆಯಲ್ಲಿರುವ ನಂಜನಗೂಡಿನಲ್ಲಿ ನಂಜುಂಡೇಶ್ವರ ದೇವಾಲಯ ಇದೆ.

ಕಪಿಲಾ ನದಿಯ ದಂಡೆಯ ತೀರದಲ್ಲಿ ಪರಶುರಾಮ ತಪಸ್ಸು ಮಾಡಿದ್ದನೆಂಬ ಐತಿಹ್ಯ ಇದೆ. ಪರಶುರಾಮನ ತಪಸ್ಸಿಗೆ ಒಲಿದ ಶಿವನು ಪ್ರತ್ಯಕ್ಷನಾಗಿ ವರ ನೀಡಿದ್ದ ಈ ಸ್ಥಳದಲ್ಲಿ ನಂತರದಲ್ಲಿ ಗೌತಮ ಋಷಿಗಳು ತಪಸ್ಸು ಮಾಡಿ ದೇವಾಲಯವನ್ನು ಅಭಿವೃದ್ಧಿಪಡಿಸಿದ್ದರೆನ್ನಲಾಗಿದೆ. ದಕ್ಷಿಣ ಭಾರತದ ದೊಡ್ಡ ದೇವಾಲಯಗಳಲ್ಲಿ ನಂಜನಗೂಡು ನಂಜುಂಡೇಶ್ವರ ದೇವಾಲಯವೂ ಒಂದಾಗಿದೆ. 11ನೇ ಶತಮಾನದಲ್ಲಿ ಚೋಳರಿಂದ ಈ ದೇವಾಲಯ ವಿಸ್ತರಣೆಗೊಂಡಿತೆಂದು ಹೇಳಲಾಗಿದೆ. ಸುಮಾರು 385 ಅಡಿ ಉದ್ದ, 160 ಅಡಿ ಅಗಲದ ಈ ದೇವಾಲಯದಲ್ಲಿ 140ಕ್ಕೂ ಹೆಚ್ಚು ಕಂಬಗಳ ಸಂಕೀರ್ಣವಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

1845ರಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್, ನಂಜನಗೂಡು ನಂಜುಂಡೇಶ್ವರ ದೇವಾಲಯಕ್ಕೆ ಗೋಪುರ ನಿರ್ಮಿಸಿದರು. ಇಲ್ಲಿ ನಡೆಯುವ ರಥೋತ್ಸವಕ್ಕೆ ವಿವಿಧೆಡೆಯಿಂದ ಲಕ್ಷಾಂತರ ಭಕ್ತರು ಭೇಟಿ ಕೊಡುತ್ತಾರೆ. ವೈಭವದಿಂದ ನಡೆಯುವ ತೆಪ್ಪೋತ್ಸವವನ್ನು ಜನ ಕಣ್ತುಂಬಿಕೊಳ್ಳುತ್ತಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular