HomeLatest NewsBREAKING NEWS: ಅಮೃತಸರದಲ್ಲಿ ರೆಡ್ ಅಲರ್ಟ್ ಮುಕ್ತಾಯ: ಸಾಮಾನ್ಯ ಚಟುವಟಿಕೆ ಪುನರಾರಂಭ

BREAKING NEWS: ಅಮೃತಸರದಲ್ಲಿ ರೆಡ್ ಅಲರ್ಟ್ ಮುಕ್ತಾಯ: ಸಾಮಾನ್ಯ ಚಟುವಟಿಕೆ ಪುನರಾರಂಭ

ನವದೆಹಲಿ: ಭಾರತ-ಪಾಕಿಸ್ತಾನದ ನಡುವೆ ಕದನ ವಿರಾಮ ಘೋಷಣೆಯಾಗಿದೆ. ಈ ಹಿನ್ನೆಲೆಯಲ್ಲಿ ಉಭಯ ದೇಶಗಳ ನಡುವೆ ಸೇನಾ ಕಾರ್ಯಾಚರಣೆ ಸ್ಥಗಿತಗೊಂಡಿದೆ. ಪಂಜಾಬ್ ನ ಅಮೃತಸರದಲ್ಲಿ ರೆಡ್ ಅಲರ್ಟ್ ಮುಕ್ತಾಯಗೊಂಡಿದೆ.

ಕದನ ವಿರಾಮ ಘೋಷಣೆ ಬಳಿಕವೂ ಪಂಜಾಬ್ ನ ಹಲವೆಡೆ ಸೈರನ್ ಸದ್ದು ಮೊಳಗಿತ್ತು. ಪಾಕ್ ಸೇನೆಯಿಂದ ದಾಳಿಯ ಭೀತಿ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ಅಮೃತಸರದಾದ್ಯಂತ ರೆಡ್ ಅಲರ್ಟ್ ಘೋಷಿಸಲಾಗಿತ್ತು. ಯಾರೂ ಮನೆಗಳಿಂದ ಹೊರಬರದಂತೆ ಸೂಚಿಸಲಾಗಿತ್ತು.

ಇದೀಗ ಅಮೃತಸರದಲ್ಲಿ ರೆಡ್ ಅಲರ್ಟ್ ಮುಕ್ತಾಯವಾಗಿದೆ. ಅಮೃತಸರ ಸೇರಿದಂತೆ ಹಲವು ನಗರಗಳಲ್ಲಿ ಸಾಮಾನ್ಯ ಚಟುವಟಿಕೆ ಪುನರಾರಂಭವಾಗಿದೆ. ಪರಿಸ್ಥಿತಿ ಸಹಜ ಸ್ಥಿತಿಯತ್ತ ಮರಳುತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular