HomeHealthರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಅಮೃತಬಳ್ಳಿ ಕಷಾಯ

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಅಮೃತಬಳ್ಳಿ ಕಷಾಯ

ಕೊರೋನಾ ಅವಧಿಯಲ್ಲಿ ಅತಿ ಹೆಚ್ಚು ಬೇಡಿಕೆ ಗಳಿಸಿಕೊಂಡ ವಸ್ತುಗಳಲ್ಲಿ ಅಮೃತಬಳ್ಳಿಯೂ ಒಂದು. ಬಹುತೇಕರಿಗೆ ಇದರ ಬಳಕೆ ಹೇಗೆಂಬುದೇ ತಿಳಿದಿಲ್ಲ.

ಅಮೃತಬಳ್ಳಿ ಕೇವಲ ಶೀತ, ಜ್ವರ ದೂರ ಮಾಡುವುದು ಮಾತ್ರವಲ್ಲ ನಿಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮಧುಮೇಹವನ್ನು ನಿಯಂತ್ರಣದಲ್ಲಿ ಇಡುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದರ ಕಷಾಯವನ್ನು ತಯಾರಿಸುವಾಗ ಕಡ್ಡಿಯ ಸಿಪ್ಪೆ ತೆಗೆಯಿರಿ. ಬಳಿಕ ಜಜ್ಜಿ ನೀರಿನೊಂದಿಗೆ ಬೆರೆಸಿ ಕುದಿಸಿ. ಸೋಸುವ ಮುನ್ನ ಹಾಲು ಹಾಗೂ ಜಜ್ಜಿದ ಶುಂಠಿ ಬೆರೆಸಿ. ಬಳಿಕ ಕುಡಿಯಿರಿ. ಸಿಹಿ ಬೇಕು ಎನ್ನುವವರು ತುಸು ಜೇನು ಸೇರಿಸಿ ಕುಡಿಯಿರಿ.

ಇದರ ಕಷಾಯ ತಯಾರಿಸುವ ಇನ್ನೊಂದು ವಿಧಾನವೆಂದರೆ ಅಮೃತಬಳ್ಳಿ ಕಡ್ಡಿ, 1 ತುಂಡು ಚಕ್ಕೆ, ನಾಲ್ಕಾರು ಕಾಳು ಮೆಣಸು, ಏಲಕ್ಕಿ, ಲವಂಗ ಸೇರಿಸಿ. ಸಣ್ಣ ಉರಿಯಲ್ಲಿಟ್ಟು ಐದು ನಿಮಿಷ ಕುದಿಸಿ. ತುಳಸಿ ಎಲೆ ಸೇರಿಸಿ. ಬಳಿಕ ಸೋಸಿ ನಿಂಬೆರಸ ಬೆರೆಸಿ ಕುಡಿಯಿರಿ.

For Latest News Updates, Join Our Whatsapp Community🚩
RELATED ARTICLES

Most Popular