HomeEntertainmentಅಮೃತ ಪ್ರೇಮ್ ಅವರ ಹೊಸ ಚಿತ್ರದ ಟೈಟಲ್ ರಿವಿಲ್

ಅಮೃತ ಪ್ರೇಮ್ ಅವರ ಹೊಸ ಚಿತ್ರದ ಟೈಟಲ್ ರಿವಿಲ್

‘ಟಗರು ಪಲ್ಯ’ ಮೂಲಕ ಭರ್ಜರಿ ಯಶಸ್ಸು ಕಂಡಿದ್ದ ಅಮೃತ ಪ್ರೇಮ್ ಇದೀಗ ಹೊಸ ಚಿತ್ರ ಒಂದರಲ್ಲಿ ಅಭಿನಯಿಸುತ್ತಿದ್ದು, ಇದರ ಟೈಟಲ್ ಟೀಸರ್ ಅನ್ನು ನಿನ್ನೆ  ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಲಾಗಿದೆ. ‘ಅಮ್ಮ’ ಎಂಬ ಟೈಟಲ್ ಇಡಲಾಗಿದ್ದು, ಪ್ರೇಕ್ಷಕರಿಂದ ಸಾಕಷ್ಟು ಮೆಚ್ಚುಗೆ ಗಳಿಸಿದೆ. ತನ್ನ ಶೀರ್ಷಿಕೆಯಿಂದಲೇ ಸಾಕಷ್ಟು ಕುತೂಹಲ  ಮೂಡಿಸಿದ್ದು, ಇನ್ನೇನು ಶೀಘ್ರದಲ್ಲೇ  ಈ ಸಿನಿಮಾ ಶೂಟಿಂಗ್ ಪ್ರಾರಂಭವಾಗಲಿದೆ.

ಮಹೇಶ್ ಬಾಬು ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಸ್ಮೈಲ್ ಗುರು ರಕ್ಷಿತ್, ಅಮೃತಾ ಪ್ರೇಮ್ ಮತ್ತು ಜೆರುಶಾ ಪ್ರಮುಖ ಪಾತ್ರದಲ್ಲಿದ್ದು, ಅನೂಪ್ ಸೀಳಿನ್ ಸಂಗೀತ ಸಂಯೋಜನೆ ನೀಡಿದ್ದಾರೆ. ಎಂಎಂಎಂ ಪಿಕ್ಚರ್ಸ್ & ಎ ಕ್ಲಾಸ್ ಸಿನಿ ಫಿಲಂಸ್ ಬ್ಯಾನರ್ ನಲ್ಲಿ ಅನುರಾಘ್ ಆರ್ ಮತ್ತು ಮಿಥುನ್ ಕೆ ಎಸ್ ನಿರ್ಮಾಣ ಮಾಡಿದ್ದಾರೆ. ಸತೀಶ್ ಚಂದ್ರ ಸಂಕಲನ,  ವಿಜಯ್ ಈಶ್ವರ್ ಸಂಭಾಷಣೆ ಹಾಗೂ ಸತ್ಯ ಅವರ ಛಾಯಾಗ್ರಹಣವಿದೆ.

For Latest News Updates, Join Our Whatsapp Community🚩
RELATED ARTICLES

Most Popular