HomeInternationalBIG NEWS: ಅಮೆರಿಕಾ ವಿಮಾನದಲ್ಲಿ ಬೆಂಕಿ ಅವಘಡ: 12 ಜನರಿಗೆ ಗಾಯ

BIG NEWS: ಅಮೆರಿಕಾ ವಿಮಾನದಲ್ಲಿ ಬೆಂಕಿ ಅವಘಡ: 12 ಜನರಿಗೆ ಗಾಯ

ಅಮೆರಿಕಾ ವಿಮಾನದಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ತುರ್ತು ಬೂಸ್ಪರ್ಶ ಮಾಡಿಋವ ಘಟನೆ ನಡೆದಿದೆ.

ಅಮೆರಿಕದ ಕೊಲೊರಾಡೋ ಸ್ಟ್ರಿಂಗ್ಸ್ ನಿಂದ 178 ಜನರನ್ನು ಹೊತ್ತು ಡಲ್ಲಾಸ್ ಪೋರ್ಟ್ ವರ್ತ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುತ್ತಿತ್ತು. ಈ ವೇಳೆ ವಿಮಾನದ ಎಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ತಕ್ಷಣ ಡೆನ್ವರ್ ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಲಾಯಿತು. ಲ್ಯಾಂಡ್ ಆಗುತ್ತಿದಂತೆ ವಿಮಾನದಲ್ಲಿ ಬೆಂಕಿ ತೀವ್ರತೆ ಇನ್ನಷ್ಟು ಹೆಚ್ಚಿದ್ದು ವಿಮಾನ ನಿಲ್ದಾಣದಲ್ಲಿ ದಟ್ಟ ಹೊಗೆ ಆವರಿಸಿದೆ. ತಕ್ಷಣ ವಿಮಾನ ಸಿಬ್ಬಂದಿ 6 ಸಿಬ್ಬಂದಿ ಸೇರಿದಂತೆ 178 ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅವಘಡದಲ್ಲಿ 12 ಜನರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಗಿದೆ ಎಂದು ತಿಳಿದುಬಂದಿದೆ. ಬೆಂಕಿ ಅವಘಡಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.

For Latest News Updates, Join Our Whatsapp Community🚩
RELATED ARTICLES

Most Popular