HomeIndiaಅ. 1 ರಿಂದ ಡಿಎಲ್, ವೋಟರ್ ಲಿಸ್ಟ್, ಆಧಾರ್, ವಿವಾಹ ನೋಂದಣಿ ಸೇರಿ ಎಲ್ಲಾ ದಾಖಲೆಗಳಿಗೆ...

ಅ. 1 ರಿಂದ ಡಿಎಲ್, ವೋಟರ್ ಲಿಸ್ಟ್, ಆಧಾರ್, ವಿವಾಹ ನೋಂದಣಿ ಸೇರಿ ಎಲ್ಲಾ ದಾಖಲೆಗಳಿಗೆ ಜನನ ಪ್ರಮಾಣಪತ್ರವೇ ಮೂಲಾಧಾರ

ನವದೆಹಲಿ: ಅಕ್ಟೋಬರ್ 1ರಿಂದ ಎಲ್ಲಾ ದಾಖಲೆ, ನೋಂದಣಿಗಳಿಗೆ ಜನನ ಪ್ರಮಾಣ ಪತ್ರವೇ ಮೂಲಾದಾರ ನಿಯಮ ಜಾರಿಗೆ ಬರಲಿದೆ.

ಡಿಎಲ್, ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ, ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ಆಧಾರ್, ಮದುವೆ ನೋಂದಣಿ, ಸರ್ಕಾರಿ ಉದ್ಯೋಗ ನೇಮಕಾತಿ, ಇನ್ನಿತರ ಯಾವುದೇ ಉದ್ದೇಶಗಳಿಗೆ ಜನನ ಪ್ರಮಾಣ ಪತ್ರವನ್ನು ಏಕೈಕ ದಾಖಲೆಯಾಗಿ ಬಳಕೆ ಮಾಡುವುದನ್ನು ಕಡ್ಡಾಯಗೊಳಿಸುವ ಜನನ ಮತ್ತು ಮರಣ ನೋಂದಣಿ ತಿದ್ದುಪಡಿ ಕಾಯ್ದೆ 2023 ಅಕ್ಟೋಬರ್ 1ರಿಂದ ಜಾರಿಯಾಗಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೇಂದ್ರ ಗೃಹ ಸಚಿವಾಲಯದ ವತಿಯಿಂದ ಬುಧವಾರ ಈ ಕುರಿತು ಅಧಿಸೂಚನೆ ಹೊರಡಿಸಲಾಗಿದೆ. ಅಕ್ಟೋಬರ್ 1ರಿಂದ ಕಾಯ್ದೆಯ ನಿಬಂಧನೆಗಳು ಜಾರಿಗೆ ಬರುತ್ತವೆ. ನೋಂದಾಯಿತ ಜನನ ಮತ್ತು ಮರಣಗಳ ರಾಷ್ಟ್ರೀಯ ಮತ್ತು ರಾಜ್ಯಮಟ್ಟದ ಡೇಟಾಬೇಸ್ ರಚಿಸಲು ಇದು ಸಹಾಯ ಮಾಡಲಿದ್ದು, ಸಾರ್ವಜನಿಕ ಸೇವೆ ಸಾಮಾಜಿಕ ಯೋಜನೆ ಡಿಜಿಟಲ್ ನೋಂದಣಿ ಪರಿಣಾಮಕಾರಿ ಮತ್ತು ಪಾರದರ್ಶಕತೆ ಖಚಿತಪಡಿಸಲಿದೆ ಎಂದು ಹೇಳಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular