HomeJobsಅಮೆಜಾನ್ ಉದ್ಯೋಗ ಕಡಿತ: ಭಾರತದ ಮೇಲೆ ಪರಿಣಾಮ ಬೀರುತ್ತದೆಯೇ?

ಅಮೆಜಾನ್ ಉದ್ಯೋಗ ಕಡಿತ: ಭಾರತದ ಮೇಲೆ ಪರಿಣಾಮ ಬೀರುತ್ತದೆಯೇ?

ಇ-ಕಾಮರ್ಸ್ ದೈತ್ಯ ಅಮೆಜಾನ್ ಈ ವಾರ ತನ್ನ ಸಾವಿರಾರು ಸಿಬ್ಬಂದಿಯನ್ನು ವಜಾಗೊಳಿಸಲು ಸಜ್ಜಾಗುತ್ತಿದೆ. ಟೆಕ್ ಕಂಪನಿಯು ಜನವರಿ 27ರ ಮಂಗಳವಾರದಿಂದ ಸುಮಾರು 16,000 ಉದ್ಯೋಗಿಗಳನ್ನು ವಜಾಗೊಳಿಸುವ ನಿರೀಕ್ಷೆಯಿದೆ.  ಈ ಹೊಸ ಸುತ್ತಿನ ಉದ್ಯೋಗ ಕಡಿತ 2026ರ ಮಧ್ಯದ ವೇಳೆಗೆ ಒಟ್ಟು 30,000 ಉದ್ಯೋಗಗಳನ್ನು ತೆಗೆದುಹಾಕುವ ಕಂಪನಿಯ ಯೋಜನೆಯ ವಿಸ್ತರಣೆಯಾಗಿದೆ.

ಈ ಬೆಳವಣಿಗೆಯು ಭಾರತದಲ್ಲಿರುವ ಅಮೆಜಾನ್ ತಂಡಗಳಿಗೆ ಆತಂಕವನ್ನುಂಟುಮಾಡಿದೆ. ಏಕೆಂದರೆ ಅದರ ವ್ಯಾಪಾರ ಘಟಕಗಳಾದ ಅಮೆಜಾನ್ ವೆಬ್ ಸರ್ವೀಸಸ್ ಮತ್ತು ಅಮೆಜಾನ್ ಪ್ರೈಮ್ ಮೇಲೆ ಪರಿಣಾಮ ಬೀರುವ ನಿರೀಕ್ಷೆಯಿದೆ. ಪೀಪಲ್ ಎಕ್ಸ್ಪೀರಿಯೆನ್ಸ್ ಮತ್ತು ಟೆಕ್ನಾಲಜಿ ಎಚ್ಆರ್ ಘಟಕಗಳಲ್ಲಿನ ಸಿಬ್ಬಂದಿಗಳು ಸಹ ವಜಾಗೊಳಿಸುವ ಸಿಬ್ಬಂದಿ ಸಾಲಿನಲ್ಲಿ ಸೇರಿದ್ದಾರೆ.

ಈ ಉದ್ಯೋಗ ಕಡಿತದ ಪರಿಣಾಮ ಭಾರತದ ಮೇಲೆ ಹೇಗೆ ಆಗಲಿದೆ? ಎಂಬುದು ಅಸ್ಪಷ್ಟವಾಗಿದೆ. ಕಂಪನಿಯು ಅಕ್ಟೋಬರ್ 2025ರಲ್ಲಿ ಮೊದಲ ಸುತ್ತಿನ ವಜಾಗೊಳಿಸುವಿಕೆ ನಡೆಸಿತ್ತು. ಅದಕ್ಕೆ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನಗಳು ಕಾರಣವಾಗಿತ್ತು ಎಂದು ಕಂಪನಿ ಹೇಳಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆದರೆ ಭಾರತೀಯ ಕಚೇರಿಗಳ ಮೇಲೆ ಆಗ ಮಾಡಿದ ಉದ್ಯೋಗ ಕಡಿತ ಹೆಚ್ಚು ಪರಿಣಾಮ ಬೀರಲಿಲ್ಲ. ಈಗ ಎರಡನೇ ಹಂತದ ಕಡಿತ ಭಾರತೀಯ ತಂಡಗಳ ಮೇಲೆ ಪರಿಣಾಮ ಬೀರಬಹುದು ಎಂದು ಅನೇಕ ವರದಿಗಳು ಹೇಳಿವೆ.

ಅಮೆಜಾನ್‌ನ ಕಾರ್ಪೊರೇಟ್ ತಂಡಗಳು ಬೆಂಗಳೂರು, ಹೈದರಾಬಾದ್ ಮತ್ತು ಚೆನ್ನೈನಲ್ಲಿ ಹೆಚ್ಚಾಗಿವೆ. ಇತ್ತೀಚಿನ ವಜಾಗೊಳಿಸುವಿಕೆ ಕಂಪನಿಯ ಇತಿಹಾಸದಲ್ಲೇ ಅತಿ ದೊಡ್ಡದಾಗಿದೆ. ಆದ್ದರಿಂದ ಭಾರತದ ಮೇಲೆ ಪರಿಣಾಮ ಬೀರುತ್ತದೆ ಎಂದು ಅಂದಾಜಿಸಲಾಗಿದೆ.

ಅಮೆಜಾನ್ ಈ ಹಿಂದೆ 2022 ಮತ್ತು 2023ರಲ್ಲಿ ಸುಮಾರು 27,000 ಉದ್ಯೋಗಿಗಳನ್ನು ವಜಾಗೊಳಿಸಿತ್ತು. ಕಂಪನಿಯು ಪ್ರಸ್ತುತ ವಿಶ್ವಾದ್ಯಂತ ಸುಮಾರು 16 ಲಕ್ಷ ಜನರನ್ನು ನೇಮಿಸಿಕೊಂಡಿದೆ, ಇತ್ತೀಚಿನ ಕಡಿತವು ಕೇವಲ ತನ್ನ ಕಾರ್ಪೊರೇಟ್ ಕಚೇರಿಯ ಸುಮಾರು 350,000 ಉದ್ಯೋಗಿಗಳ ಮೇಲೆ ಕೇಂದ್ರೀಕೃತವಾಗಿದೆ.

ಕಳೆದ ವರ್ಷ 269 ಕಂಪನಿಗಳು ವಿಶ್ವದಾದ್ಯಂತ ಟೆಕ್ ಉದ್ಯಮದಲ್ಲಿ 123,941 ಉದ್ಯೋಗಿಗಳನ್ನು ವಜಾಗೊಳಿಸಿವೆ. 2024 ರಿಂದ ಕಂಪನಿಗಳ ಉದ್ಯೋಗ ಕಡಿತದ ಸಂಖ್ಯೆ ದಿಗ್ಭ್ರಮೆಗೊಳಿಸುತ್ತಿವೆ.

ಇಂಟೆಲ್, ಸಿಸ್ಕೋ, ಮೈಕ್ರೋಸಾಫ್ಟ್, ಗೂಗಲ್ ಮತ್ತು ಅಮೆಜಾನ್‌ನಂತಹ ಕಂಪನಿಗಳು ದೊಡ್ಡ ಪ್ರಮಾಣದ ಉದ್ಯೋಗ ಕಡಿತ ಮಾಡುತ್ತಿವೆ. ಯಾವುದೇ ಒಂದು ಕಾರಣವನ್ನು ನೀಡದೇ ಕಂಪನಿಗಳು ವಜಾ ಮಾಡುತ್ತಿವೆ. ಆದರೆ ಬಂಡವಾಳ, ಎಐ ಎಂಬ ಕಾರಣಗಳನ್ನು ನೀಡುತ್ತಿವೆ.

ಎಐಗೆ ಹೆಚ್ಚಿನ ಹಣ ಒದಗಿಸಲು ಅನೇಕ ಹುದ್ದೆಗಳನ್ನು ಕಡಿತ ಮಾಡಲಾಗುತ್ತಿದೆ ಎಂದು ವರದಿಯಾಗಿದೆ. ಪ್ರಸ್ತುತ ನಡೆಯುತ್ತಿರುವ ತಾಂತ್ರಿಕ ತಂಡದ ವಜಾಗೊಳಿಸುವಿಕೆ ಉದ್ಯೋಗಿಗಳಿಗೆ ಸಂಕಷ್ಟ ತಂದಿದೆ.  

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular