HomeEntertainmentಅಲ್ಲು ಅರ್ಜುನ್ ಹುಟ್ಟು ಹಬ್ಬಕ್ಕೆ ರಿಲೀಸ್ ಆಯ್ತು ಬಹುನಿರೀಕ್ಷಿತ 'ಪುಷ್ಪ2' ಟೀಸರ್

ಅಲ್ಲು ಅರ್ಜುನ್ ಹುಟ್ಟು ಹಬ್ಬಕ್ಕೆ ರಿಲೀಸ್ ಆಯ್ತು ಬಹುನಿರೀಕ್ಷಿತ ‘ಪುಷ್ಪ2’ ಟೀಸರ್

ಇಂದು ಅಲ್ಲು ಅರ್ಜುನ್ ಹುಟ್ಟುಹಬ್ಬವಾಗಿದ್ದು ಅವರ ಅಭಿಮಾನಿಗಳು ಹಬ್ಬದಂತೆ ಆಚರಿಸುತ್ತಿದ್ದಾರೆ ಇಂದು ಅಲ್ಲು ಅರ್ಜುನ್ ಹುಟ್ಟುಹಬ್ಬಕ್ಕೆ ಪುಷ್ಪ ಚಿತ್ರತಂಡ ಟೀಸರ್ ಬಿಡುಗಡೆ ಮಾಡುವ ಮೂಲಕ ಉಡುಗೊರೆಯಾಗಿ ನೀಡಿದೆ. ಮೈತ್ರಿ ಮೂವಿ ಮೇಕರ್ಸ್ ಯುಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಿರುವ ಟೀಸರ್ ಕೇವಲ 40  ನಿಮಿಷಗಳಲ್ಲಿ 15 ಲಕ್ಷ ವೀಕ್ಷಣೆ ಪಡೆದುಕೊಂಡಿದೆ.

ಈ ಚಿತ್ರವನ್ನು ಸುಕುಮಾರ್ ನಿರ್ದೇಶಿಸಿದ್ದು, ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಸೇರಿದಂತೆ ವಿಜಯ್ ಸೇತುಪತಿ, ಫಹಾದ್ ಫಾಝಿಲ್, ಪ್ರಿಯಾಮಣಿ, ಅನಸೂಯ ಭಾರದ್ವಾಜ್, ಶ್ರೀ ತೇಜ್, ಜಗದೀಶ್ ಪ್ರತಾಪ್, ಜಗಪತಿ ಬಾಬು, ಪ್ರಕಾಶ್ ರಾಜ್, ಸುನಿಲ್, ರಾವ್ ರಮೇಶ್,  ಮತ್ತು ಅಜಯ್ ತೆರೆ ಹಂಚಿಕೊಂಡಿದ್ದಾರೆ ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡಲಾಗಿದ್ದು,  ದೇವಿ ಶ್ರೀ ಪ್ರಸಾದ್  ಸಂಗೀತ ಸಂಯೋಜನೆ ನೀಡಿದ್ದಾರೆ. ಕಾರ್ತಿಕ ಶ್ರೀನಿವಾಸ್ ಸಂಕಲನವಿದೆ.

For Latest News Updates, Join Our Whatsapp Community🚩
RELATED ARTICLES

Most Popular