ಮೊಸಳೆ ಮುಖ….. ಮೀನಿನ ದೇಹ……. ಭೋಪಾಲ್‌ನಲ್ಲಿ ವಿಚಿತ್ರ ಜಲಚರ ಜೀವಿ ಪತ್ತೆ: ಸ್ಥಳೀಯರಲ್ಲಿ ಹೆಚ್ಚಿದ ಆತಂಕ

ನೀರಿನ ಒಡಲಾಳದೊಳಗೆ ಇರೋ ಮೊಸಳೆಗಳನ್ನ ನೋಡ್ತಿದ್ರೆನೇ ಜೀವ ಬಾಯಿಗೆ ಬಂದು ಬಿಡುತ್ತೆ. ಅದಕ್ಕಿಂತಲೂ ಡೆಂಜರ್ ಅಷ್ಟೇ ಭಯಂಕರ ಜೀವಿಗಳು ಅಲಿಗೇಟರ್ ಗಾರ್ ಫಿಶ್. ಇದು ನೋಡುವುದಕ್ಕೆ ಮೊಸಳೆಯೂ ಅಲ್ಲ.. ಮೀನೂ ಅಲ್ಲ ಹಾಗಿರುತ್ತೆ.

ಇದರ ಶಿರ ಭಾಗ ಮೊಸಳೆಯಂತಿದ್ದು, ದೇಹದ ಭಾಗ ಹಾವಿನಂತಿದೆ. ಇವು ಮನುಷ್ಯರ ಮೇಲೂ ದಾಳಿ ಮಾಡುತ್ತೆ. ಇದೇ ಅಲಿಗೇಟರ್ ಗಾರ್ ಮೀನು ಮಧ್ಯಪ್ರದೇಶದ ಭೋಪಾಲ್‌ನ ವಿಶಾಲ ಕೊಳವೊಂದರಲ್ಲಿ ಕಾಣಿಸಿಕೊಂಡಿದೆ. ಭಾರತದಲ್ಲಿ ಈ  ಜಾತಿಯ ಜೀವಿ ಇದೇ ಮೊದಲ ಬಾರಿ ಕಾಣಿಸಿದೆ, ವ್ಯಕ್ತಿಯೊಬ್ಬರಿಗೆ ಈ ಮೀನು ಕಾಣಿಸಿಕೊಂಡಿದ್ದು, ಅವರು ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ವೈರಲ್ ಆಗಿರುವ ಮೀನಿನ ವಿಡಿಯೋ ನೋಡಿದ ಅರಣ್ಯಾಧಿಕಾರಿಗಳು ಮೀನುಗಾರಿಕಾ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ. ಅವರು ಭೋಪಾಲ್ ಕೊಳದಲ್ಲಿ ಪತ್ತೆಯಾದ ಮೀನನ್ನ ಅಲಿಗೇಟರ್ ಗಾರ್ ಫಿಶ್ ಎಂದು ಖಚಿತಪಡಿಸಿದ್ದಾರೆ.

ಈ ಮೀನು ಭೋಪಾಲ್ ದೊಡ್ಡ ಕೊಳಕ್ಕೆ ಹೇಗೆ ಬಂತು ಎಂದು ಅಧಿಕಾರಿಗಳು ಗೊಂದಲಕ್ಕೊಳಗಾಗಿದ್ದಾರೆ. ಈ ಮೀನು ದೊಡ್ಡ ಕೊಳದಲ್ಲಿರುವ ಉಳಿದ ಜೀವಿಗಳ ಜೀವಕ್ಕೆ ಕುತ್ತು ತಂದಿಡುವ ಪ್ರಾಣಿಯಾಗಿದೆ. ಎಂದು ತಜ್ಞರು ಭೀತಿ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ ಈ ಮೀನು ಮನುಷ್ಯರ ಮೇಲೆ ದಾಳಿ ಮಾಡಲು ಹಿಂಜರಿಯುವುದಿಲ್ಲ ಎನ್ನಲಾಗಿದೆ.

ಈ ಮೀನು ಸುಮಾರು ಒಂದೂವರೆ ಅಡಿ ಇರುವ ಜೀವಿಯಾಗಿರುತ್ತೆ. ಆದರೆ ಹೊಸದಾಗಿ ಪತ್ತೆಯಾದ ಅಲಿಗೇಟರ್ ಗಾರ್ ಫಿಶ್ 12 ಅಡಿ ಉದ್ಭವಿದೆ ಎಂದು ಅರಣ್ಯಾಧಿಕಾರಿಗಳು ಹೇಳಿದ್ದಾರೆ. ಈ ಪ್ರಜಾತಿಯ ಮೀನು ಇದೇ ಮೊದಲ ಬಾರಿಗೆ ಭಾರತದಲ್ಲಿ ಕಂಡು ಬಂದಿದ್ದು, ಇದು ಹೇಗೆ ಸಾಧ್ಯ ಅನ್ನೋದೇ ಈಗ ಎಲ್ಲರಿಗೂ ಕಾಡ್ತಿರುವ ಪ್ರಶ್ನೆಯಾಗಿದೆ. ಅಲ್ಲದೇ ಇಲ್ಲಿ ಇರುವುದು ಇದೊಂದೇ ಮೀನಾ ಅಥವಾ ಇನ್ನೂ ಹೆಚ್ಚು ಮೀನುಗಳಿವಿಯೋ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಲು ಹುಡುಕಾಟ ಆರಂಭಿಸಿದ್ದಾರೆ.

ಈಗ ಈ ಮೀನಿನ ವಿಡಿಯೋ ಮತ್ತು ಫೋಟೋ ಮೀನಿನ ಕುರಿತು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸ್ಥಳೀಯ ಜನರು ಈ ಮೀನಿನ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read