HomeLatest Newsಪ್ರತಿ ದಿನ ಈ ಕೆಲಸ ಮಾಡುವುದರಿಂದ ಸಿಗುತ್ತೆ ಇಷ್ಟೆಲ್ಲಾ ಆರೋಗ್ಯ ಪ್ರಯೋಜನ

ಪ್ರತಿ ದಿನ ಈ ಕೆಲಸ ಮಾಡುವುದರಿಂದ ಸಿಗುತ್ತೆ ಇಷ್ಟೆಲ್ಲಾ ಆರೋಗ್ಯ ಪ್ರಯೋಜನ

 

ಅಧ್ಯಯನದ ಪ್ರಕಾರ ಹೃದಯಾಘಾತದ ಪ್ರಮಾಣವನ್ನು ಸಂಭೋಗ ಕಡಿಮೆ ಮಾಡುತ್ತದೆ. ವಾರಕ್ಕೆರಡು ಬಾರಿ ಲೈಂಗಿಕ ಕ್ರಿಯೆಯಲ್ಲಿ ತೊಡಗುವ ಪುರುಷರಿಗಿಂತ, ತಿಂಗಳಿಗೊಮ್ಮೆ ಲೈಂಗಿಕ ಕ್ರಿಯೆಯಲ್ಲಿ ತೊಡಗುವ ಪುರುಷರಿಗೆ ಹೃದಯಾಘಾತವಾಗುವುದು ಜಾಸ್ತಿ.

ರೋಗದ ಸೋಂಕಿನಿಂದ ರಕ್ಷಣೆ :

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಂಭೋಗ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಗೆ ಮಾಡುತ್ತದೆ. ನೆಗಡಿ, ಜ್ವರದಂತಹ ಸಣ್ಣ ಪುಟ್ಟ ರೋಗದ ವಿರುದ್ದ ಹೋರಾಡಲು ದೇಹದಲ್ಲಿ ಶಕ್ತಿ ತುಂಬುತ್ತದೆ.

ಒತ್ತಡ ಕಡಿಮೆ ಮಾಡುತ್ತದೆ :

ಕೆಲಸ ಹಾಗೂ ಕೌಟುಂಬಿಕ ಒತ್ತಡ ಹೋಗಲಾಡಿಸಲು ಇದು ರಾಮಬಾಣ. ಲೈಂಗಿಕ ಕ್ರಿಯೆಯಿಂದ ಒತ್ತಡ ಕಡಿಮೆಯಾಗುತ್ತದೆ. ಮನಸ್ಸು ಉಲ್ಲಾಸಗೊಂಡು, ಸಂತೋಷ ಇಮ್ಮಡಿಗೊಳ್ಳುತ್ತದೆ ಎಂದು ಅಧ್ಯಯನ ಹೇಳುತ್ತದೆ.

ನೋವು ಶಮನ :

ತಲೆ ನೋವು ಎಂಬ ಕಾರಣಕ್ಕೆ ಲೈಂಗಿಕ ಕ್ರಿಯೆಯಿಂದ ದೂರವಿರಬೇಡಿ. ಸಂಭೋಗದಲ್ಲಿ ತೊಡಗುವುದರಿಂದ ನೋವು ನಿವಾರಣೆಯಾಗುತ್ತದೆ. ಹಾರ್ಮೋನ್ ಆಕ್ಸಿಟೋಸಿನ್ ಐದು ಪಟ್ಟು ಹೆಚ್ಚಾಗುವುದರಿಂದ ನೋವಿನ ವಿರುದ್ದ ದೇಹ ಹೋರಾಡುತ್ತದೆ.

ದೀರ್ಘಾಯುಷ್ಯ :

ದೀರ್ಘ ಆಯುಷ್ಯ ಹೊಂದಬಹುದು. ಐದು ವಾರಕ್ಕೊಮ್ಮೆ ಲೈಂಗಿಕ ಕ್ರಿಯೆಯಲ್ಲಿ ತೊಡಗುವ ಪುರುಷರಿಗಿಂತ, ವಾರಕ್ಕೆರಡು ಬಾರಿ ಲೈಂಗಿಕ ಕ್ರಿಯೆ ನಡೆಸುವ ಪುರುಷರು ಬಹುಕಾಲ ಬದುಕುತ್ತಾರಂತೆ. ಆರೋಗ್ಯಪೂರ್ಣ ಚರ್ಮಕ್ಕೆ ಇದು ಸಹಕಾರಿ.

ರಕ್ತ ಪರಿಚಲನೆ ಹೆಚ್ಚಿಸುತ್ತದೆ :

ಸಂಭೋಗದಿಂದ ಹೃದಯ ಗತಿ ಏರುತ್ತದೆ. ಹೊಸ ರಕ್ತ ನಿಮ್ಮ ಅಂಗಾಂಗ ಹಾಗೂ ಜೀವಕೋಶಗಳಿಗೆ ಸೇರುತ್ತದೆ. ರಕ್ತ ಪರಿಚಲನೆ ಹೆಚ್ಚಾಗುತ್ತದೆ.

ಉತ್ತಮ ನಿದ್ರೆ :

ಉತ್ತಮ ನಿದ್ರೆಗೆ ಸಂಭೋಗ ಸಹಕಾರಿ. ರಾತ್ರಿ ಸರಿಯಾದ ನಿದ್ರೆ ಬರುವುದರಿಂದ ಆರೋಗ್ಯ ವೃದ್ಧಿಸುತ್ತದೆ. ದೇಹಕ್ಕೆ ಉತ್ತಮ ವ್ಯಾಯಾಮ ನೀಡುತ್ತದೆ. ಅರ್ಧ ಗಂಟೆ ಸಂಭೋಗದಿಂದ 80 ರಷ್ಟು ಕ್ಯಾಲೋರಿ ಕಡಿಮೆಯಾಗುತ್ತದೆ.

(ವಿವಾಹಿತರಿಗೆ ಮಾತ್ರ)

For Latest News Updates, Join Our Whatsapp Community🚩
RELATED ARTICLES

Most Popular