HomeInternationalWatch Video | ದಕ್ಷಿಣ ಅಮೆರಿಕದಲ್ಲಿ ಅನ್ಯಗ್ರಹ ಜೀವಿಯ ಮೃತ ದೇಹ ಪತ್ತೆ ?

Watch Video | ದಕ್ಷಿಣ ಅಮೆರಿಕದಲ್ಲಿ ಅನ್ಯಗ್ರಹ ಜೀವಿಯ ಮೃತ ದೇಹ ಪತ್ತೆ ?

ಭೂಮಿ ಮೇಲಿರುವ ಮನುಕುಲವನ್ನು ಸದಾ ಕುತೂಹಲದಲ್ಲಿಡುವ ವಿಚಾರಗಳಲ್ಲಿ ಅನ್ಯಗ್ರಹ ಜೀವಿಗಳೂ ಸೇರಿವೆ. 2023 ರಲ್ಲಿ ಅನ್ಯಗ್ರಹ ಜೀವಿಗಳು ನಮ್ಮ ಗ್ರಹಕ್ಕೆ ಬರಲಿವೆ ಎಂಬ ನಿರೀ‌ಕ್ಷೆಗಳು ನಿಜವಾಗುವ ಹಾಗೆ ಗೋಚರಿಸುತ್ತಿವೆ.

ಬೊಲಿವಿಯಾದ ಗ್ರಾಮವೊಂದರಲ್ಲಿ ಅನ್ಯಗ್ರಹ ಜೀವಿಯೊಂದು ಮೃತಪಟ್ಟ ಸ್ಥಿತಿಯಲ್ಲಿ ಕಂಡಿದೆ. ಆದರೆ ಈ ಜೀವಿಯ ದೇಹ ದಿಢೀರ್‌ ಎಂದು ನಾಪತ್ತೆಯಾಗಿದೆ. ಬೊಲಿವಿಯಾದ ಲಾ ಪಾಜ಼್‌ಮ ಹುರೈನಾ ಎಂಬ ಪಟ್ಟಣದಲ್ಲಿ ಸಂಭವಿಸಿದೆ. ಸುದ್ದಿ ವಾಹಿನಿಗಳಲ್ಲಿ ಬಿತ್ತರಗೊಂಡ ಅನೇಕ ಚಿತ್ರಗಳು ಹಾಗೂ ವಿಡಿಯೋಗಳು ಭಾರೀ ಅಚ್ಚರಿ ಮೂಡಿಸಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬೀದಿ ನಾಯಿಯೊಂದು ಈ ಅನ್ಯಗ್ರಹ ಜೀವಿಯನ್ನು ಅಚ್ಚರಿಯಿಂದ ನೋಡುತ್ತಿರುವ ದೃಶ್ಯವೊಂದು ವೈರಲ್ ಆಗಿತ್ತು. ನಾಯಿಗಳಿಗೆ ಕೆಲವೊಂದು ಅಲೌಕಿಕ ಶಕ್ತಿಗಳು ಗೋಚರಿಸುತ್ತವೆ ಎನ್ನುವ ಬಲವಾದ ನಂಬಿಕೆ ಇದೆ. ನಾಯಿಗಳ ನಿರಂತರ ಬೊಗಳುವಿಕೆ ಕಾರಣದಿಂದ ಈ ಪ್ರದೇಶದಲ್ಲಿ ಅಲೌಕಿಕ ವಸ್ತುಗಳು ಇರುವ ಶಂಕೆ ಮೂಡಿತ್ತು.

ಮತ್ತೊಂದು ವಿಡಿಯೋದಲ್ಲಿ ಯುಎಫ್‌ಓ ರೀತಿಯ ವಸ್ತುವೊಂದು ಆಗಸದಲ್ಲಿ ತೇಲಾಡುತ್ತಿರುವುದನ್ನು ನೋಡಬಹುದಾಗಿದೆ.

ಈ ಜೀವಿಯ ದೇಹವನ್ನು ನೋಡುವ ಎರಡು ರಾತ್ರಿಗಳ ಮುನ್ನ ಆಗಸದಲ್ಲಿ ಹಸಿರು ಬಣ್ಣದ ಬೃಹತ್‌ ಬೆಳಕೊಂದು ಮೂಡಿದ್ದನ್ನು ಗ್ರಾಮಸ್ಥರು ನೋಡಿದ್ದರು. ಬಹುಶಃ ಅದು ಈ ಜೀವಿಯನ್ನು ಭೂಮಿಗೆ ತಂದು ಬಿಟ್ಟ ಗಗನನೌಕೆ ಇರಬಹುದು ಎಂದು ಊಹಿಸಲಾಗಿದೆ.

 

For Latest News Updates, Join Our Whatsapp Community🚩
RELATED ARTICLES

Most Popular