HomeIndia'ಆಧಾರ್ ಕಾರ್ಡ್‌' ಬಳಕೆದಾರರಿಗೆ ಅಲರ್ಟ್..! ಡಿಸೆಂಬರ್ 31ರವರೆಗೆ ಮಾತ್ರ ಈ ವಿಶೇಷ ಸೌಲಭ್ಯ

‘ಆಧಾರ್ ಕಾರ್ಡ್‌’ ಬಳಕೆದಾರರಿಗೆ ಅಲರ್ಟ್..! ಡಿಸೆಂಬರ್ 31ರವರೆಗೆ ಮಾತ್ರ ಈ ವಿಶೇಷ ಸೌಲಭ್ಯ

ಆಧಾರ್ ಕಾರ್ಡ್ ಹೊಂದಿರುವವರಿಗೆ ಮಹತ್ವದ ಮಾಹಿತಿ. ಕೇಂದ್ರ ಸರ್ಕಾರದ ಅಧೀನದಲ್ಲಿರುವ ಆಧಾರ್ ನೀಡುವ ಸಂಸ್ಥೆ Unique Identification Authority of India (UIDAI) ಇತ್ತೀಚೆಗೆ ಪ್ರಮುಖ ಪ್ರಕಟಣೆ ಹೊರಡಿಸಿದೆ.

ಆಧಾರ್ ಮೊಬೈಲ್ ಆಪ್ (Aadhaar Mobile App) ಮೂಲಕ ಇ-ಮೇಲ್ ವಿಳಾಸ (E-mail Address) ನವೀಕರಣ ಸೇವೆಯನ್ನು ಉಚಿತವಾಗಿ ನೀಡಲಾಗುವುದು ಎಂದು ತಿಳಿಸಿದೆ. ಆದರೆ, ಈ ಸೌಲಭ್ಯ ಸೀಮಿತ ಅವಧಿಗೆ ಮಾತ್ರ ಲಭ್ಯವಿರುತ್ತದೆ ಎಂದು ಸ್ಪಷ್ಟಪಡಿಸಿದೆ.

ಪ್ರಸ್ತುತ, ಆಧಾರ್ ಮೊಬೈಲ್ ಆಪ್ ಮೂಲಕ ಇ-ಮೇಲ್ ವಿಳಾಸವನ್ನು ನವೀಕರಿಸಲು ₹75 ಶುಲ್ಕ ವಿಧಿಸಲಾಗುತ್ತಿದೆ. ಈ ಶುಲ್ಕವನ್ನು ಸಂಪೂರ್ಣವಾಗಿ ಮನ್ನಾ ಮಾಡಲು UIDAI ನಿರ್ಧರಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

UIDAI ಅಧಿಕೃತ ಅಧಿಸೂಚನೆಯ ಪ್ರಕಾರ, “ಆಧಾರ್ ಮೊಬೈಲ್ ಅಪ್ಲಿಕೇಶನ್ ಮೂಲಕ ಇ-ಮೇಲ್ ವಿಳಾಸ ನವೀಕರಣಕ್ಕೆ ವಿಧಿಸಲಾಗುತ್ತಿದ್ದ ₹75 ಶುಲ್ಕವನ್ನು ಮನ್ನಾ ಮಾಡಲಾಗಿದೆ. ಮುಂದಿನ ಆರು ತಿಂಗಳ ಕಾಲ ಈ ಸೇವೆಯನ್ನು ಉಚಿತವಾಗಿ ಒದಗಿಸಲಾಗುವುದು. ಈ ನಿರ್ಧಾರವು 2026ರ ಜುಲೈ 1ರಿಂದ ಜಾರಿಗೆ ಬಂದು, 2026ರ ಡಿಸೆಂಬರ್ 31ರವರೆಗೆ ಮಾತ್ರ ಅನ್ವಯವಾಗಲಿದೆ” ಎಂದು ತಿಳಿಸಲಾಗಿದೆ.

ಪ್ರಸ್ತುತ ಆಧಾರ್ ಬಳಕೆದಾರರು ತಮ್ಮ ಇ-ಮೇಲ್ ವಿಳಾಸವನ್ನು ನವೀಕರಿಸಲು ₹75 ಪಾವತಿಸುತ್ತಿದ್ದಾರೆ. ಆದರೆ, ಮುಂದಿನ ಆರು ತಿಂಗಳ ಅವಧಿಯಲ್ಲಿ ಈ ಶುಲ್ಕವನ್ನು ಪಾವತಿಸಬೇಕಾಗಿಲ್ಲ.

ನಿಮ್ಮ ಆಧಾರ್ ಕಾರ್ಡ್‌ಗೆ ಇ-ಮೇಲ್ ಐಡಿ ಲಿಂಕ್ ಆಗಿದ್ದರೆ, ಆಧಾರ್‌ಗೆ ಸಂಬಂಧಿಸಿದ ಎಲ್ಲಾ ನೋಟಿಫಿಕೇಶನ್‌ಗಳು ಮತ್ತು ಮಾಹಿತಿಗಳನ್ನು ಸಮಯಕ್ಕೆ ಸರಿಯಾಗಿ ಪಡೆಯಬಹುದು. ಇದರಿಂದ ನಿಮ್ಮ ಆಧಾರ್ ವ್ಯವಹಾರಗಳ (Transactions) ಕುರಿತು ನಿರಂತರ ಮಾಹಿತಿ ಲಭ್ಯವಾಗುತ್ತದೆ.

ಇತ್ತೀಚೆಗಷ್ಟೇ UIDAI ಹೊಸ Aadhaar Mobile App ಅನ್ನು ಬಿಡುಗಡೆ ಮಾಡಿದ್ದು, ಆಧಾರ್ ಸಂಬಂಧಿತ ಸೇವೆಗಳನ್ನು ಹೆಚ್ಚು ಸುರಕ್ಷಿತ ಹಾಗೂ ಸುಲಭವಾಗಿ ಒದಗಿಸುವ ಉದ್ದೇಶ ಹೊಂದಿದೆ.

ಜುಲೈ 1, 2026ರಿಂದ ಡಿಸೆಂಬರ್ 31, 2026ರವರೆಗೆ ಮಾತ್ರ ಈ ಉಚಿತ ಸೇವೆ ಲಭ್ಯವಿರುತ್ತದೆ. ಬಳಿಕ ಈ ಸೌಲಭ್ಯವನ್ನು ಮುಂದುವರಿಸಬೇಕೇ ಅಥವಾ ಬೇಡವೇ ಎಂಬುದರ ಕುರಿತು ಪರಿಶೀಲನೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular