HomeLatest Newsಟೀಮ್ ಇಂಡಿಯಾದ ಅಜೇಯ ಸರ್ದಾರ್: ರಹಾನೆ ನಾಯಕತ್ವದ ಈ ವಿಶ್ವದಾಖಲೆ ನಿಮಗೆ ಗೊತ್ತೇ?

ಟೀಮ್ ಇಂಡಿಯಾದ ಅಜೇಯ ಸರ್ದಾರ್: ರಹಾನೆ ನಾಯಕತ್ವದ ಈ ವಿಶ್ವದಾಖಲೆ ನಿಮಗೆ ಗೊತ್ತೇ?

ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ‘ಜಿಂಕ್ಸ್’ ಎಂದೇ ಪ್ರಸಿದ್ಧರಾಗಿರುವ ಅಜಿಂಕ್ಯ ರಹಾನೆ ಅವರ ನಾಯಕತ್ವದ ಶೈಲಿ ಮತ್ತು ಅವರ ಹೆಸರಲ್ಲಿದ್ದ ಅಪರೂಪದ ದಾಖಲೆ ಪ್ರತಿಯೊಬ್ಬ ಕ್ರಿಕೆಟ್ ಪ್ರೇಮಿಯ ನೆನಪಿನಲ್ಲಿ ಸದಾ ಹಸಿರಾಗಿರುತ್ತದೆ. ವಿಶೇಷವಾಗಿ ಆಸ್ಟ್ರೇಲಿಯಾ ನೆಲದಲ್ಲಿ ಭಾರತ ರಚಿಿಸಿದ ಐತಿಹಾಸಿಕ ಟೆಸ್ಟ್ ಸರಣಿ ಗೆಲುವಿನಲ್ಲಿ ರಹಾನೆ ಅವರ ಶಾಂತ ಹಾಗೂ ಧೀಮಂತ ನಾಯಕತ್ವ ಪ್ರಮುಖ ಪಾತ್ರ ವಹಿಸಿತ್ತು.

ವರ್ಷಗಳ ಹಿಂದೆ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದಾಗ ಅಡಿಲೇಡ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಭಾರತ ತಂಡ ಕೇವಲ 36 ರನ್‌ಗಳಿಗೆ ಆಲೌಟ್ ಆಗಿ ಹೀನಾಯ ಸೋಲು ಕಂಡಿತ್ತು. ಆ ಪಂದ್ಯದ ನಂತರ ಖಾಯಂ ನಾಯಕ ವಿರಾಟ್ ಕೊಹ್ಲಿ ತಾತಾಲಿಕವಾಗಿ ತಾಯ್ನಾಡಿಗೆ ಮರಳಿದ್ದರು. ಆ ಕಠಿಣ ಪರಿಸ್ಥಿತಿಯಲ್ಲಿ ಸರಣಿಯ ಉಳಿದ ಮೂರು ಪಂದ್ಯಗಳ ನಾಯಕತ್ವ ವಹಿಸಿಕೊಂಡಿದ್ದ ರಹಾನೆ, ಧೈರ್ಯಗೆಡದೆ ಇಡೀ ತಂಡವನ್ನು ಅದ್ಭುತವಾಗಿ ಮುನ್ನಡೆಸಿದರು. ಪರಿಣಾಮವಾಗಿ ಭಾರತ 2-1 ಅಂತರದಿಂದ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ಎತ್ತಿಹಿಡಿದು ಇತಿಹಾಸ ಬರೆಯಿತು.

ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ರಹಾನೆಗೆ ಭಾರತ ತಂಡದ ಖಾಯಂ ನಾಯಕನಾಗುವ ಅವಕಾಶ ಸಿಗಲಿಲ್ಲ. ಆದರೆ ಪ್ರಮುಖ ನಾಯಕರ ಗೈರುಹಾಜರಿಯಲ್ಲಿ ಸಿಕ್ಕ ಅವಕಾಶಗಳನ್ನೆಲ್ಲ ಅವರು ಯಶಸ್ಸಾಗಿ ಪರಿವರ್ತಿಸಿದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತವನ್ನು ಒಟ್ಟು 6 ಪಂದ್ಯಗಳಲ್ಲಿ ಮುನ್ನಡೆಸಿದ ರಹಾನೆ, ಒಂದೂ ಪಂದ್ಯದಲ್ಲೂ ಸೋಲರಿಯದ ಅಪರೂಪದ ದಾಖಲೆ ಬರೆದಿದ್ದಾರೆ. ಇವರು ನಾಯಕತ್ವ ವಹಿಸಿದ 6 ಟೆಸ್ಟ್ ಪಂದ್ಯಗಳಲ್ಲಿ ಭಾರತ 4 ಪಂದ್ಯಗಳಲ್ಲಿ ಜಯಗಳಿಸಿದ್ದರೆ, 2 ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿದ್ದವು. ಕನಿಷ್ಠ 5 ಟೆಸ್ಟ್ ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದ ನಾಯಕರ ಪೈಕಿ ರಹಾನೆ ಅವರ ಗೆಲುವಿನ ಶೇಕಡಾವಾರು ಪ್ರಮಾಣ ಅತ್ಯಂತ ಹೆಚ್ಚಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆಸ್ಟ್ರೇಲಿಯಾ ವಿರುದ್ಧದ ಸರಣಿ ಮಾತ್ರವಲ್ಲದೆ, 2017ರಲ್ಲಿ ಧರ್ಮಶಾಲಾದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ನಿರ್ಣಾಯಕ ಟೆಸ್ಟ್ ಹಾಗೂ 2018ರಲ್ಲಿ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲೂ ರಹಾನೆ ಭಾರತಕ್ಕೆ ಭರ್ಜರಿ ಗೆಲುವು ತಂದುಕೊಟ್ಟಿದ್ದರು. ನಂತರ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲೂ ತಂಡವನ್ನು ಮುನ್ನಡೆಸಿದ್ದರು.

ಟೆಸ್ಟ್ ಮಾದರಿ ಮಾತ್ರವಲ್ಲದೆ ಏಕದಿನ ಕ್ರಿಕೆಟ್‌ನಲ್ಲೂ ರಹಾನೆ ನಾಯಕತ್ವ ಸಾಬೀತಾಗಿದೆ. ಜಿಂಬಾಬ್ವೆ ವಿರುದ್ಧ ನಡೆದ ಮೂರು ಏಕದಿನ ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿ, ಮೂರರಲ್ಲೂ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು. ಇನ್ನು ಜಿಂಬಾಬ್ವೆ ವಿರುದ್ಧವೇ ನಡೆದ ಎರಡು ಟಿ20 ಪಂದ್ಯಗಳ ಪೈಕಿ ಭಾರತ ಒಂದರಲ್ಲಿ ಗೆದ್ದು, ಮತ್ತೊಂದರಲ್ಲಿ ಸೋಲನುಭವಿಸಿತ್ತು.

ಒಟ್ಟಾರೆಯಾಗಿ ಭಾರತೀಯ ಕ್ರಿಕೆಟ್ ತಂಡವನ್ನು ಮೂರೂ ಮಾದರಿ ಸೇರಿ ಒಟ್ಟು 11 ಪಂದ್ಯಗಳಲ್ಲಿ ಮುನ್ನಡೆಸಿದ ರಹಾನೆ, ಕೇವಲ ಒಂದೇ ಒಂದು ಪಂದ್ಯದಲ್ಲಿ ಸೋಲು ಕಂಡಿದ್ದಾರೆ. ಟೆಸ್ಟ್ ಮತ್ತು ಏಕದಿನ ಮಾದರಿಯಲ್ಲಿ ನಾಯಕನಾಗಿ ಅವರು ಸೋಲನ್ನೇ ಕಾಣದಿರುವುದು ವಿಶೇಷ. ವಿರಾಟ್ ಕೊಹ್ಲಿ, ಎಂಎಸ್ ಧೋನಿ ಮತ್ತು ರೋಹಿತ್ ಶರ್ಮಾ ಅವರಂತಹ ದಿಗ್ಗಜ ನಾಯಕರಿಗೂ ಸಾಧ್ಯವಾಗದ ಈ ಅಪರೂಪದ ‘ಅಜೇಯ’ ನಾಯಕತ್ವದ ದಾಖಲೆ ರಹಾನೆ ಹೆಸರಿನಲ್ಲಿ ಶಾಶ್ವತವಾಗಿ ಉಳಿಯಲಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular