HomeKarnatakaBIG NEWS: ಮಂಡ್ಯದಲ್ಲಿಯೂ ಐಶ್ವರ್ಯ ಗೌಡ ವಿರುದ್ಧ ವಂಚನೆ ಪ್ರಕರಣ ದಾಖಲು: ನೋಟಿಸ್ ನೀಡಲು ಮುಂದಾದ...

BIG NEWS: ಮಂಡ್ಯದಲ್ಲಿಯೂ ಐಶ್ವರ್ಯ ಗೌಡ ವಿರುದ್ಧ ವಂಚನೆ ಪ್ರಕರಣ ದಾಖಲು: ನೋಟಿಸ್ ನೀಡಲು ಮುಂದಾದ ಪೊಲೀಸರು

ಮಂಡ್ಯ: ಮಾಜಿ ಸಂಸದ ಡಿ.ಕೆ.ಸುರೇಶ್ ತಂಗಿ ಎಂದು ಹೇಳಿಕೊಂಡು ಬೆಂಗಳೂರಿನ ವರಾಹಿ ಚಿನ್ನದಂಗಡಿ ಮಾಲಕಿಗೆ ಚಿನ್ನ ಖರೀದಿಸಿ ವಂಚಿಸಿದ್ದ ಪ್ರಕರಣದ ಬೆನ್ನಲ್ಲೇ ಐಶ್ವರ್ಯಾ ಗೌಡ ವಿರುದ್ಧ ಸಾಲು ಸಾಲು ವಂಚನೆ ಪ್ರಕರಣ ದಾಖಲಾಗಿವೆ.

ಬೆಂಗಳೂರಿನ ಬಳಿಕ ಮಂಡ್ಯದಲ್ಲಿಯೂ ಐಶ್ವರ್ಯ ಗೌಡ ವಿರುದ್ಧ ವಂಚನೆ ಕೇಸ್ ದಾಖಲಾಗಿದೆ. ರವಿಕುಮಾರ್ ಹಾಗೂ ಪೂರ್ಣಿಮಾ ಎಂಬುವವರು ಐಶ್ವರ್ಯ ಗೌಡ ವಿರುದ್ಧ ಮಂಡ್ಯದ ಪೂರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಆರೋಪಿ ಐಶ್ವರ್ಯ ಗೌಡಗೆ ನೋಟಿಸ್ ನೀಡಲು ಪೊಲೀಸರು ಮುಂದಾಗಿದ್ದಾರೆ. ಐಶ್ವರ್ಯ ಗೌಡ ಹಣ ಡಬಲ್ ಮಾಡಿಕೊಡುವ ಆಸೆ ತೋರಿಸಿ 55 ಲಕ್ಷ ನಗದು ಹಾಗೂ 100 ಗ್ರಾಂ ಚಿನ್ನಾಭರಣ ಪಡೆದು ವಂಚಿಸಿದ್ದಾಳೆ ಎಂದು ರವಿಕುಮಾರ್ ಹಾಗೂ ಪೂರ್ಣಿಮಾ ದೂರು ದಾಖಲಿಸಿದ್ದಾರೆ. ದೂರು ಹಿನ್ನೆಲೆಯಲ್ಲಿ ಮಂಡ್ಯ ಪೊಲೀಸರು ಸಾಕ್ಷಿ ಕಲೆ ಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಚಿನ್ನದಂಗಡಿ ಮಾಲಕಿಗೆ ವಂಚನೆ ಪ್ರಕರಣದಲ್ಲಿ ಜಾಮೀನು ಮೇಲೆ ಬಿಡುಗಡೆಯಾಗಿರುವ ಐಶ್ವರ್ಯಾ ಗೌಡಗೆ ಮತ್ತೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.

 

For Latest News Updates, Join Our Whatsapp Community🚩
RELATED ARTICLES

Most Popular