HomeIndiaBREAKING : ಲ್ಯಾಂಡಿಂಗ್ ವೇಳೆ ಏರ್ ಇಂಡಿಯಾ ವಿಮಾನದ ಟೈರ್ ಸ್ಪೋಟ : ಪುಕೆಟ್‌'ನಲ್ಲಿ ತಪ್ಪಿದ...

BREAKING : ಲ್ಯಾಂಡಿಂಗ್ ವೇಳೆ ಏರ್ ಇಂಡಿಯಾ ವಿಮಾನದ ಟೈರ್ ಸ್ಪೋಟ : ಪುಕೆಟ್‌’ನಲ್ಲಿ ತಪ್ಪಿದ ಭಾರಿ ದುರಂತ !

ಹೈದರಾಬಾದ್ನಿಂದ ಥೈಲ್ಯಾಂಡ್’ನ ಪುಕೆಟ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನವು ಬುಧವಾರ ಲ್ಯಾಂಡಿಂಗ್ ಸಮಯದಲ್ಲಿ ತಾಂತ್ರಿಕ ಸಮಸ್ಯೆಗೆ ಒಳಗಾಗಿದೆ.

ವಿಮಾನವು ರನ್‌’ವೇ ಮೇಲೆ ಇಳಿಯುವಾಗ ಮುಂಭಾಗದ ಚಕ್ರದಲ್ಲಿ (Nose wheel) ತಾಂತ್ರಿಕ ದೋಷ ಕಾಣಿಸಿಕೊಂಡು ‘ಹಾರ್ಡ್ ಲ್ಯಾಂಡಿಂಗ್’ ಆಗಿದೆ.ವಿಮಾನದಲ್ಲಿದ್ದ ಎಲ್ಲಾ 133 ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದ್ದು, ಯಾವುದೇ ಗಾಯಗಳಾಗಿಲ್ಲ.

ಈ ಘಟನೆಯಿಂದಾಗಿ ವಿಮಾನ ನಿಲ್ದಾಣದ ರನ್ವೇಯನ್ನು ತಪಾಸಣೆ ಮತ್ತು ತೆರವು ಕಾರ್ಯಕ್ಕಾಗಿ ಸುಮಾರು 5 ಗಂಟೆಗಳ ಕಾಲ (ಸ್ಥಳೀಯ ಸಮಯ ಸಂಜೆ 6 ರವರೆಗೆ) ಮುಚ್ಚಲಾಗಿತ್ತು.ಘಟನೆಗೆ ನಿಖರವಾದ ಕಾರಣವೇನು ಎಂಬ ಬಗ್ಗೆ ಹೆಚ್ಚಿನ ಮಾಹಿತಿ ಇನ್ನು ಲಭ್ಯವಾಗಬೇಕಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಲ್ಯಾಂಡ್ ಆಗಬೇಕಿದ್ದ ಎಲ್ಲಾ ವಿಮಾನಗಳನ್ನು ಹತ್ತಿರದ ವೈಮಾನಿಕ ಪ್ರದೇಶದಲ್ಲಿಯೇ ತಡೆಹಿಡಿಯಲಾಯಿತು ಮತ್ತು ಕೆಲವು ವಿಮಾನಗಳನ್ನು ಪರ್ಯಾಯ ವಿಮಾನ ನಿಲ್ದಾಣಗಳಿಗೆ ಬದಲಾಯಿಸಲಾಯಿತು.  ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ AXB938 ನಿಗದಿತ ಸಮಯಕ್ಕಿಂತ (ಬೆಳಿಗ್ಗೆ 11:40) ಮುಂಚಿತವಾಗಿ ಅಂದರೆ ಬೆಳಿಗ್ಗೆ 11:24 ಕ್ಕೆ ಆಗಮಿಸಿತ್ತು.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular