ತಿರುವನಂತಪುರಂ: ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದಲ್ಲಿ ಲ್ಯಾಂಡಿಂಗ್ ಗೇರ್ ಹಾಗೂ ಟೈರ್ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಿಮಾನ ತುರ್ತು ಭೂಸ್ಪರ್ಶವಾದ ಘಟನೆ ಕೇರಳದ ಕೊಚ್ಚಿಯಲ್ಲಿ ನಡೆದಿದೆ.
ಜೆಡ್ಡಾದಿಂದ ಕೊಝಿಕ್ಕೋಡ್ ಹೊರಟಿದ್ದ 160 ಪ್ರಯಾಣಿಕರಿಂದ ಏರ್ ಇಂಡಿಯಾ ಎಕ್ಸ್ ಪ್ರೆಸ್ IX 398 ವಿಮಾನವನ್ನು ಕೊಚ್ಚಿ ಏರ್ ಪೋರ್ಟ್ ನಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ.
ವಿಮಾನವನು ಸುರಕ್ಷಿತವಾಗಿ ಭೂಸ್ಪರ್ಷ ಮಾಡಲಾಗಿದ್ದು, ಪ್ರಯಾಣಿಕರು ಹಾಗೂ ಸಿಬ್ಬಂದಿಗಳಿಗೆ ಯಾವುದೇ ತೊಂದರೆಯಾಗಿಲ್ಲ. ಪರಿಶೀಲನೆ ನಡೆಸಿದಾದ ವಿಮಾನದ ಬಲಭಾಗದ ಎರಡೂ ಟೈರ್ ಗಳು ಸ್ಫೋಟಗೊಂಡಿರುವುದು ಪತ್ತೆಯಾಗಿದೆ. ಪ್ರಯಾಣಿಕರು ಸಿಬ್ಬಂದಿಗಳು ಸುರಕ್ಷಿತರಾಗಿದ್ದಾರೆ ಎಂದು ತಿಳಿದುಬಂದಿದೆ.

