HomeLatest NewsBREAKING: ಅಹಮದಾಬಾದ್ ವಿಮಾನ ದುರಂತ ಪ್ರಕರಣ: ಮತ್ತೋರ್ವ ಪ್ರಯಾಣಿಕ ಕೂಡ ಪವಾಡದ ರೀತಿಯಲ್ಲಿ ಬಚಾವ್!

BREAKING: ಅಹಮದಾಬಾದ್ ವಿಮಾನ ದುರಂತ ಪ್ರಕರಣ: ಮತ್ತೋರ್ವ ಪ್ರಯಾಣಿಕ ಕೂಡ ಪವಾಡದ ರೀತಿಯಲ್ಲಿ ಬಚಾವ್!

ಅಹಮದಾಬಾದ್: ಗುಜರಾತ್ ನ ಅಹಮದಾಬಾದ್ ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಇದೀಗ ಮತ್ತೋರ್ವ ಪ್ರಯಾಣಿಕ ಕೂಡ ಪವಾಡದ ರೀತಿಯಲ್ಲಿ ಬಚಾವ್ ಆಗಿದ್ದಾರೆ ಎಂದು ತಿಳಿದುಬಂದಿದೆ.

ಅಹಮದಾಬಾದ್ ನ ಏರ್ ಪೋರ್ಟ್ ನಿಂದ ಲಂಡನ್ ಗೆ ತೆರಳುತ್ತಿದ್ದ ಏರ್ ಇಂಡಿಯಾ AI-171 ವಿಮಾನ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಪತನಗೊಂಡಿದೆ. ಎರಡು ಕಟ್ಟಡಗಳಿಗೆ ಅಪ್ಪಳಿಸಿ ಬೆಂಕಿ ಹೊತ್ತಿಕೊಂಡು ನೆಲಕ್ಕೆ ಉರುಳಿದೆ. ವಿಮಾನದಲ್ಲಿದ್ದ 242 ಜನರಲ್ಲಿ ಇದೀಗ ಇಬ್ಬರು ಪ್ರಯಾಣಿಕರು ಬಚಾವ್ ಆಗಿದ್ದಾರೆ. ಈಗಾಗ್ಲೇ ಓರ್ವ ಪ್ರಯಾಣಿಕ 38 ವರ್ಷದ ರಮೇಶ್ ಪವಾಡ ರೀತಿಯಲ್ಲಿ ಬದುಕುಳಿದಿದ್ದಾರೆ ಎಂದು ತಿಳಿದುಬಂದಿತ್ತು. ಇದೀಗ ಮತ್ತೋರ್ವ ಪ್ರಯಾಣಿಕ ಕೂಡ ಬದುಕುಳಿದಿದ್ದಾರೆ ಎಂದು ತಿಳಿದುಬಂದಿದೆ.

ರಮೇಶ್ ಸೀಟ್ ನಂ.11ರಲ್ಲಿ ಕುಳಿತಿದ್ದರು. ವಿಮಾನ ಪತನವಾಗುತ್ತಿದ್ದಂತೆ ಎಮರ್ಜನ್ಸಿ ಡೋರ್ ಮೂಲಕ ಹಾರಿ ಪ್ರಾಣ ರಕ್ಷಿಸಿಕೊಂಡಿದ್ದಾರೆ. ಇದೇ ವೇಳೆ ಇನ್ನೋರ್ವ ಪ್ರಯಾಣಿಕ ಕೂಡ ಅಪಾಯದಿಂದ ಪಾರಾಗಿ ಬದುಕುಳಿದಿದ್ದಾರೆ ಎಂದು ತಿಳಿದುಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಿಮಾನ ದುರಂತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದ್ದ 242 ಜನರಲ್ಲಿ ಇದೀಗ ಇಬ್ಬರು ಪ್ರಯಾಣಿಕರು ಬದುಕುಳಿದಿದ್ದಾರೆ. ಸದ್ಯ ಗಯಾಳುಗಳನ್ನು ಅಹಮದಾಬಾದ್ ನ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular