HomeIndiaBIG NEWS: ಗೆಸ್ಟ್ ಹೌಸ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ನರ್ಸ್ ಮೃತದೇಹ ಪತ್ತೆ

BIG NEWS: ಗೆಸ್ಟ್ ಹೌಸ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ನರ್ಸ್ ಮೃತದೇಹ ಪತ್ತೆ

ಆಗ್ರಾ: ಗೆಸ್ಟ್ ಹೌಸ್ ಒಂದರಲ್ಲಿ ನರ್ಸ್ ಓರ್ವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.

ದೆಹಲಿ ಮೂಲದ ಕುಸುಮ್ ಕುಮಾರಿ ಮೃತ ನರ್ಸ್. ಆಗ್ರಾಗೆ ತನ್ನ ಪೋಷಕರನ್ನು ಭೇಟಿಯಾಗಲೆಂದು ಕುಸುಮ್ ಕುಮಾರಿ ಬಂದಿದ್ದಳು. ಭೇಟಿ ಬಳಿಕ ಆಕೆ ಎಲ್ಲಿಗೆ ಹೋಗುತ್ತೇನೆ ಎಂದು ತಿಳಿಸದೇ ಹೊರಟಿದ್ದಳು.

ಈಗ ಆಗ್ರಾದ ಕಮಲಾನಗರದಲ್ಲಿರುವ ತೋರನ್ ಗೆಸ್ಟ್ ಹೌಸ್ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಆಕೆಯ ಶವ ಪತ್ತೆಯಾಗಿದ್ದು, ಹಲವು ಅನುಮಾನಕ್ಕೆ ಕಾರಣವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಹಿಳೆಯೊಬ್ಬರು ತಮ್ಮ ರೈಲು ವಿಳಂಬವಾಗಿರುವ ಕಾರಣ ಅಲ್ಲಿಯವರೆಗೆ ವಿಶ್ರಾಂತಿ ಪಡೆಯಲೆಂದು ಗೆಸ್ಟ್ ಹೌಸ್ ನಲ್ಲಿ ರೂಮ್ ಕಾಯ್ದಿರಿಸಿದ್ದರು. ಸಮಯವಾದರೂ ಮಹಿಳೆ ಹೊರ ಬರದ ಕಾರಣ ಸಿಬ್ಬಂದಿಗಳು ರೂಮ್ ಪರಿಶೀಲಿಸಿದಾಗ ಮಹಿಳೆ ಫ್ಯಾನ್ ಗೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.

ಕುಸುಮ್ ಅವರ ಪತಿ ದೆಹಲಿಯಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿದ್ದಾರೆ. ಕುಸುಮ್ ತನ್ನ ಪೋಷಕರನ್ನು ನೋಡಲೆಂದು ಆಗ್ರಾಗೆ ಬಂದಿದ್ದಳು ಎನ್ನಲಾಗಿದೆ. ಪ್ರಕರಣದ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular