HomeAgricultureಟಿವಿ, ರೇಡಿಯೋದಲ್ಲಿಯೂ ಪ್ರಕೃತಿ ವಿಕೋಪ ಎಚ್ಚರಿಕೆ: ಮುನ್ಸೂಚನೆ ವ್ಯವಸ್ಥೆಗೆ ಚಾಲನೆ ಶೀಘ್ರ

ಟಿವಿ, ರೇಡಿಯೋದಲ್ಲಿಯೂ ಪ್ರಕೃತಿ ವಿಕೋಪ ಎಚ್ಚರಿಕೆ: ಮುನ್ಸೂಚನೆ ವ್ಯವಸ್ಥೆಗೆ ಚಾಲನೆ ಶೀಘ್ರ

ನವದೆಹಲಿ: ಟಿವಿ, ರೇಡಿಯೋದಲ್ಲಿಯೂ ಪ್ರಕೃತಿ ವಿಕೋಪ ಮನ್ಸೂಚನೆ ನೀಡಲಾಗುವುದು. ಶೀಘ್ರವೇ ಈ ವ್ಯವಸ್ಥೆಗೆ ಚಾಲನೆ ನೀಡಲಾಗುತ್ತದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು ಹೇಳಿದ್ದಾರೆ.

ಪ್ರಕೃತಿ ವಿಕೋಪದ ಕುರಿತ ಎಚ್ಚರಿಕೆಯ ಸಂದೇಶಗಳನ್ನು ಟಿವಿ ಸ್ಕ್ರೀನ್ ಗಳು ಮತ್ತು ರೇಡಿಯೋಗಳಲ್ಲಿ ಬಿತ್ತರಿಸುವ ಯೋಜನೆಗೆ ಶೀಘ್ರದಲ್ಲೇ ಚಾಲನೆ ನೀಡುವುದಾಗಿ ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಭಾರಿ ಮಳೆ, ಗುಡುಗು ಸಹಿತ ಮಳೆ, ಬಿರುಗಾಳಿ, ಬಿಸಿ ಗಾಳಿ ಮೊದಲಾದ ಹವಾಮಾನ ಬದಲಾವಣೆಯ ಕುರಿತಾಗಿ ಜನರಿಗೆ ಎಚ್ಚರಿಕೆ ಸಂದೇಶ ನೀಡುವ ಸಲುವಾಗಿ ಇತ್ತೀಚೆಗೆ ಮೊಬೈಲ್ ಸಂದೇಶಗಳನ್ನು ಕಳುಹಿಸುವ ಯೋಜನೆಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಚಾಲನೆ ನೀಡಿದೆ. ಇದರ ಮುಂದುವರೆದ ಭಾಗವಾಗಿ ಟಿವಿ ಮತ್ತು ರೇಡಿಯೋಗಳಲ್ಲಿ ಪ್ರಕೃತಿ ವಿಕೋಪ ಕುರಿತ ಎಚ್ಚರಿಕೆ ಸಂದೇಶಗಳನ್ನು ಬಿತ್ತರಿಸಲಾಗುತ್ತದೆ. ಪ್ರಾದೇಶಿಕ ಭಾಷೆಗಳು ಸೇರಿದಂತೆ ಎರಡು ಭಾಷೆಯಲ್ಲಿ ಸಂದೇಶ ಬಿತ್ತರಿಸಲಿದ್ದು, ವರ್ಷಾಂತ್ಯದೊಳಗೆ ಈ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಹೇಳಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular