HomeLatest Newsಮ್ಯಾಕ್ಸ್ ವೆಲ್ ದಾಖಲೆಯ ಭರ್ಜರಿ ದ್ವಿಶತಕ: ಸೆಮಿಫೈನಲ್ ಗೆ ಆಸ್ಟ್ರೇಲಿಯಾ

ಮ್ಯಾಕ್ಸ್ ವೆಲ್ ದಾಖಲೆಯ ಭರ್ಜರಿ ದ್ವಿಶತಕ: ಸೆಮಿಫೈನಲ್ ಗೆ ಆಸ್ಟ್ರೇಲಿಯಾ

ಮುಂಬೈ: ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಏಕದಿನ ವಿಶ್ವಕಪ್ 39ನೇ ಪಂದ್ಯದಲ್ಲಿ ಆಫ್ಘಾನಿಸ್ತಾನ ವಿರುದ್ಧ ಆಸ್ಟ್ರೇಲಿಯಾ 3 ವಿಕೆಟ್ ಗಳಿಂದ ಜಯಗಳಿಸಿ ಸೆಮಿಫೈನಲ್ ಪ್ರವೇಶಿಸಿದೆ.

91 ರನ್ ಗೆ 7 ಕ್ರಿಕೆಟ್ ಕಳೆದುಕೊಂಡು ಸೋಲಿನ ಸುಳಿಯಲ್ಲಿದ್ದ ಆಸ್ಟ್ರೇಲಿಯಾ ತಂಡವನ್ನು ಸೆಮಿಫೈನಲ್ ಗೆ ಕೊಂಡೊಯ್ಯುವಲ್ಲಿ ಗ್ಲೆನ್ ಮ್ಯಾಕ್ಸ್ ವೆಲ್ ಪ್ರಮುಖ ಪಾತ್ರ ವಹಿಸಿದ್ದಾರೆ. 128 ಎಸೆತಗಳಲ್ಲಿ 21 ಬೌಂಡರಿ, 10 ಸಿಕ್ಸರ್ ಸಹಿತ ಅಜೇಯ 201 ರನ್ ಗಳಿಸಿದ ಮ್ಯಾಕ್ಸ್ವೆಲ್ ಗೆಲುವಿನ ನಿರೀಕ್ಷೆಯಲ್ಲಿದ್ದ ಆಫ್ಘಾನಿಸ್ತಾನಕ್ಕೆ ನಿರಾಸೆ ಮೂಡಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಿಶ್ವಕಪ್ ನ ಸರ್ವಶ್ರೇಷ್ಠ ಇನಿಂಗ್ಸ್ ಆಡಿದ ಆಲ್ ರೌಂಡರ್ ಮ್ಯಾಕ್ಸ್ ವೆಲ್ ಅಜೇಯ 201 ರನ್ ಗಳಿಸಿದರು. ಆಸ್ಟ್ರೇಲಿಯಾದ ಮೊಟ್ಟ ಮೊದಲ ದ್ವಿಶತಕ ಇದಾಗಿದೆ. ಮ್ಯಾಕ್ಸ್ ವೆಲ್ ಚೇಸಿಂಗ್ ನಲ್ಲಿ ದ್ವಿಶತಕ ಸಿಡಿಸಿದ ಮೊದಲಿಗರಾಗಿದ್ದಾರೆ. ವಿಶ್ವಕಪ್ ನಲ್ಲಿ ದ್ವಿಶತಕ ಸಿಡಿಸಿದ ಮೂರನೇ ಬ್ಯಾಟರ್ ಆಗಿದ್ದಾರೆ. ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಇದು 11ನೇ ದ್ವಿಶತಕವಾಗಿದೆ. ಈ ವರ್ಷದ ಎರಡನೇ ದ್ವಿಶತಕ ಇದಾಗಿದೆ. ಐದಕ್ಕಿಂತ ಕೆಳ ಕ್ರಮಾಂಕದಲ್ಲಿ ಗರಿಷ್ಠ ರನ್ ಸಾಧನೆ ಮಾಡಿದ್ದು, ಎಂಟನೇ ವಿಕೆಟ್ ಗೆ ಗರಿಷ್ಠ ಜೊತೆಯಾಟದ ದಾಖಲೆ ಬರೆದಿದ್ದಾರೆ.

ಆಸ್ಟ್ರೇಲಿಯಾ ಅಂತಿಮವಾಗಿ ಮೂರು ವಿಕೆಟ್ ಗಳಿಂದ ಜಯಗಳಿಸಿದೆ. 46.5 ಓವರ್ ಗಳಲ್ಲಿ 293 ರನ್ ಗಳಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ಪರವಾಗಿ ಇಬ್ರಾಹಿಂ ಜದ್ರಾನ್ ಅಜೇಯ 129 ರನ್ ಗಳಿಸುವ ಮೂಲಕ ದಾಖಲೆ ಬರೆದರು. ವಿಶ್ವಕಪ್ ಟೂರ್ನಿಯಲ್ಲಿ ಶತಕ ಗಳಿಸಿದ ಆಫ್ಘಾನಿಸ್ತಾನದ ಮೊದಲ ಆಟಗಾರ ಎನ್ನುವ ಹೆಗ್ಗಳಿಕೆಗೆ ಪಾತ್ರರಾದರು. ರಶೀದ್ ಖಾನ್ 35, ಹಷ್ಮತ್ ಉಲ್ಲಾ ಶಾಹಿದಿ 26, ರೆಹಮತ್ ಶಾ 30 ರನ್ ಗಳಿಸಿದರು.

ಆಸೀಸ್ ಪರವಾಗಿ ಜೋಸ್ ಹೇಜಲ್ ವುಡ್ 2 ವಿಕೆಟ್ ಪಡೆದರು. ಅಫ್ಘಾನಿಸ್ತಾನ 50 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 291 ರನ್ ಗಳಿಸಿ ಸವಾಲಿನ ಮೊತ್ತ ನೀಡಿತು.

ಗೆಲುವಿನ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ. ಗ್ಲೆನ್ ಮ್ಯಾಕ್ಸ್ ವೆಲ್ ಅಮೋಘ ಆಟದ ನೆರವಿನಿಂದ ಸೆಮಿಫೈನಲ್ ಪ್ರವೇಶಿಸಿದೆ. ಡೇವಿಡ್ ವಾರ್ನರ್ 18, ಮಿಚೆಲ್ ಮಾರ್ಷ್ 24 ರನ್ ಗಳಿಸಿದರು. ಆಫ್ಘಾನಿಸ್ತಾನ ಪರ ನವೀನ್ ಉಲ್ ಹಕ್ 2, ಅಜ್ಮತ್ ಉಲ್ಲಾ ಒಮರಾಜಿ 2, ರಶೀದ್ ಖಾನ್ 2 ವಿಕೆಟ್ ಪಡೆದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular