HomeCrimeದಾರಿ ತಪ್ಪಿದ ಮಹಿಳೆಯಿಂದ ಘೋರ ಕೃತ್ಯ: ಅಕ್ರಮ ಸಂಬಂಧ ಹೊಂದಿದ್ದ ಯುವಕನ ಕೊಲೆ

ದಾರಿ ತಪ್ಪಿದ ಮಹಿಳೆಯಿಂದ ಘೋರ ಕೃತ್ಯ: ಅಕ್ರಮ ಸಂಬಂಧ ಹೊಂದಿದ್ದ ಯುವಕನ ಕೊಲೆ

ಬೆಳಗಾವಿ: ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಆರೋಪದ ಮೇಲೆ ಯುವಕನೊಬ್ಬನನ್ನು ಮಹಿಳೆಯ ಪತಿ ಕೊಲೆ ಮಾಡಿದ್ದಾನೆ.

ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕಿನ ಹಲಕಿ ಗ್ರಾಮದ ಬಳಿ ಘಟನೆ ನಡೆದಿದೆ. 24 ವರ್ಷದ ರಮೇಶ್ ಕೊಲೆಯಾದ ಯುವಕ. ಬೈಲಹೊಂಗಲ ತಾಲೂಕಿನ ಹೊನ್ನೂರ ಗ್ರಾಮದ ನಿವಾಸಿಯಾಗಿರುವ ರಮೇಶ ಮನೆ ಪಕ್ಕದ ಮಹಿಳೆಯೊಂದಿಗೆ ಸಂಬಂಧ ಬೆಳೆಸಿದ್ದು, ಈ ವಿಚಾರ ತಿಳಿದ ಮಹಿಳೆಯ ಗಂಡ ಯಲ್ಲಪ್ಪ ಮತ್ತು ಆತನ ಸ್ನೇಹಿತರು ಸೇರಿ ರಮೇಶನನ್ನು ಕೊಲೆ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಕ್ರಮ ಸಂಬಂಧದ ವಿಚಾರ ಗೊತ್ತಾಗಿ ಒಂದು ತಿಂಗಳ ಹಿಂದೆ ಗ್ರಾಮದಲ್ಲಿ ರಾಜಿ ಪಂಚಾಯಿತಿ ಮಾಡಲಾಗಿತ್ತು. ಅಕ್ರಮ ಸಂಬಂಧ ಬೆಳೆಸಿದ ತಪ್ಪಿಗಾಗಿ ರಮೇಶ ಎರಡೂವರೆ ಲಕ್ಷ ರೂಪಾಯಿ ದಂಡವನ್ನು ಯಲ್ಲಪ್ಪನಿಗೆ ಕೊಟ್ಟಿದ್ದ. ಯಲ್ಲಪ್ಪನ ಪತ್ನಿ ಆತನನ್ನು ಬಿಟ್ಟು ರಮೇಶನ ಮನೆಗೆ ಬಂದಿದ್ದು, ಮತ್ತೆ ಗಂಡನ ಸಂಪರ್ಕ ಬೆಳೆಸಿ ತವರು ಮನೆ ಸೇರಿದ್ದಾಳೆ. ರಮೇಶನನ್ನು ಬಿಟ್ಟು ಬಂದು ಮಹಿಳೆ ಪತಿ ಹಾಗೂ ಆತನ ಸ್ನೇಹಿತರೊಂದಿಗೆ ಸೇರಿ ಕೊಲೆ ಮಾಡಿಸಿದ್ದಾರೆ ಎಂದು ರಮೇಶನ ಕುಟುಂಬದವರು ಆರೋಪಿಸಿದ್ದಾರೆ. ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular