HomeKarnatakaಮಕ್ಕಳಿಲ್ಲದ ದಂಪತಿಗಳಿಗೆ ಸರ್ಕಾರದಿಂದ ದತ್ತು ಭಾಗ್ಯ

ಮಕ್ಕಳಿಲ್ಲದ ದಂಪತಿಗಳಿಗೆ ಸರ್ಕಾರದಿಂದ ದತ್ತು ಭಾಗ್ಯ

ದಾವಣಗೆರೆ: ಕಳೆದ 16 ವರ್ಷಗಳಿಂದ ಮಕ್ಕಳಿಲ್ಲದೆ ನಿರಾಸೆಯಾಗಿದ್ದ ಬಳ್ಳಾರಿ ಮೂಲದ ದಂಪತಿಗಳು ಸರ್ಕಾರದಿಂದ 4 ತಿಂಗಳ ಗಂಡು ಮಗುವನ್ನು ದತ್ತು ಪಡೆದಿದ್ದಾರೆ.

ದಾವಣಗೆರೆ ಜಿಲ್ಲಾ ದತ್ತು ಸ್ವೀಕಾರ ಕೇಂದ್ರದಿಂದ ಬಳ್ಳಾರಿ ಮೂಲದ ದಂಪತಿಗಳು ಸೋಮವಾರ ಮಗುವನ್ನು ದತ್ತು ಪಡೆದಿದ್ದು, ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ. ಅವರು ಮಗುವನ್ನು ದತ್ತು ನೀಡಿದರು.

ಮಕ್ಕಳಿಲ್ಲದವರು ಮತ್ತು ಮಕ್ಕಳನ್ನು ಸಾಕಲು ಸಾಕ ಬಯಸುವ ಪೋಷಕರು ಮಕ್ಕಳನ್ನು ದತ್ತು ಪಡೆಯಲು ಅವಕಾಶ ಇರುತ್ತದೆ. ಪ್ರತಿಯೊಂದು ಜಿಲ್ಲೆಯಲ್ಲಿ ದತ್ತು ಸ್ವೀಕಾರ ಕೇಂದ್ರಗಳಿರುತ್ತವೆ. ಅನಾಥವಾಗಿರುವ ಮಗು, ಮಗು ಬೇಡವಾದ ದಂಪತಿಗಳಿಂದ ಮಗು ಸ್ವೀಕಾರ, ಮಗು ಪೋಷಣೆ ಮಾಡಲು ಸಾಧ್ಯವಾಗದವರಿಂದ ಮಗುವನ್ನು ಈ ಕೇಂದ್ರದಲ್ಲಿ ಪಡೆಯಲಾಗುತ್ತದೆ. ಈ ಮಗುವನ್ನು ಇಲ್ಲಿ ಪಾಲನೆ ಪೋಷಣೆ ಮಾಡಿ ಮಗುವಿಗೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಸರ್ಕಾರದಿಂದ ಕಲ್ಪಿಸಿ ಮಗುವನ್ನು ಪಾಲನೆ, ಪೋಷಣೆ ಮಾಡಲಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದತ್ತು ಸ್ವೀಕಾರದಲ್ಲಿನ ಮಗುವನ್ನು ಬೇರೆ ಪೋಷಕರು ದತ್ತು ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಇದಕ್ಕೆ ನಿಯಮಗಳಿರುತ್ತವೆ. ಮಗು ಬೇಕಾದವರು ಸೆಂಟ್ರಲ್ ಅಡಾಪ್ಷನ್ ರೀಸೋರ್ಸ್ ಅಥಾರಿಟಿ ಮತ್ತು ಸ್ಟೇಟ್ ಅಡಾಪ್ಷನ್ ರೀಸೋರ್ಸ್ ಅಥಾರಿಟಿ ವೆಬ್‍ಸೈಟ್‍ನಲ್ಲಿ ನೊಂದಣಿ ಮಾಡಿಸಬೇಕು. ಮಕ್ಕಳಿಲ್ಲದ ಪೋಷಕರು ಮಗು ದತ್ತು ಪಡೆಯಲು ನೋಂದಣಿ ನಂತರ ದಂಪತಿಗಳಿಬ್ಬರ ವಯೋಮಾನದ ಆಧಾರದ ಮೇಲೆ ಯಾವ ವಯಸ್ಸಿನ ಮಗು ದತ್ತು ಪಡೆಯಬಹುದೆಂದು ಮ್ಯಾಚ್ ಮಾಡಲಾಗುತ್ತದೆ. ಅವರ ವಯೋಮಾನ ಮತ್ತು ಷರತ್ತುಗಳನ್ನು ಪೂರೈಸಿದ ಪೋಷಕರಿಗೆ ಮಗು ದತ್ತು ನೀಡಲು ಪ್ರಕ್ರಿಯೆ ಪ್ರಾರಂಭಿಸಲಾಗುತ್ತದೆ.

ಇಂದು ದತ್ತು ಪಡೆದ ದಂಪತಿಗಳು ವಿವಾಹವಾಗಿ 16 ವರ್ಷಗಳಿಂದ ಮಕ್ಕಳಿರಲಿಲ್ಲ, ಇವರು ಸುಮಾರು 40-45 ವರ್ಷದ ವಯೋಮಾನದ ಪೋಷಕರಾಗಿರುವರು. ಇವರಿಗೆ ನಾಲ್ಕು ತಿಂಗಳ ಮಗು ಮ್ಯಾಚ್ ಆಗಿದ್ದರಿಂದ ದತ್ತು ನೀಡಲಾಗಿದೆ. ಇವರು ನೋಂದಣಿ ಮಾಡಿಸಿ ಕಳೆದ 3 ವರ್ಷಗಳಿಂದ ದತ್ತು ಪಡೆಯಲು ಕಾಯುತ್ತಿದ್ದರು.

ಪೋಷಕರು ದತ್ತು ಸ್ವೀಕರಿಸಿದ ವೇಳೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕವಿತಾ.ಟಿ, ಮಕ್ಕಳ ರಕ್ಷಣಾಧಿಕಾರಿ ಚಂದ್ರಶೇಖರ್, ಅಧೀಕ್ಷಕರಾದ ಲತಾ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular